
ಬೆಂಗಳೂರು, 18 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರ ಹೊಸ ಮತ್ತು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಎಲ್ಲಾ ಹೋಟೆಲ್ಗಳು, ಮೆಡಿಕಲ್ ಸ್ಟೋರ್ಗಳು, ಪಿಜಿ ಮತ್ತು ಕ್ಯಾಂಟೀನ್ಗಳಲ್ಲಿ ಇನ್ಮುಂದೆ ಕಡ್ಡಾಯವಾಗಿ ಕ್ಯೂಆರ್ ಕೋಡ್ ಅಳವಡಿಸಲು ನಿರ್ಧರಿಸಲಾಗಿದೆ,
ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿನೂತನ ವಿನ್ಯಾಸಗಳನ್ನು ಅಳವಡಿಸಲಾಗಿದೆ,
ಸಾರ್ವಜನಿಕರು ಯಾವುದೇ ಹೋಟೆಲ್ ಅಥವಾ ಮೆಡಿಕಲ್ ಅಂಗಡಿಗಳಲ್ಲಿ ಅಕ್ರಮ, ಅಸ್ವಚ್ಛತೆ ಅಥವಾ ಸೇವಾ ನ್ಯೂನತೆ ಕಂಡುಬಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ದೂರು ದಾಖಲಿಸಬಹುದಾಗಿದೆ.
ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೋಟೆಲ್ ಮತ್ತು ಅಂಗಡಿಗಳು ಮತ್ತು ಪಿಜಿಗಳು ಕ್ಯಾಂಟೀನ್ಗೆ ತಪಾಸಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ತಮ್ಮ ಸುತ್ತಮುತ್ತಲಿನ ನ್ಯೂನತೆಗಳ ವಿರುದ್ಧ ಹಿಂಜರಿಕೆಯಿಲ್ಲದೆ ನೇರವಾಗಿ ದೂರು ಸಲ್ಲಿಸಬಹದಾಗಿದ್ದು, ಸ್ವೀಕೃತವಾಗುವ ದೂರುಗಳ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ ತಿಳಿಸಿದ್ದಾರೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R