ಬಲ್ಡೋಟ ಸ್ಥಾಪನೆ ವಿರೋಧಿಸಿ 301ನೇ ದಿನ ಶಾಸಕರ ಮನೆ ಕಡೆ
ಕೊಪ್ಪಳ, 18 ಆಗಸ್ಟ್ (ಹಿ.ಸ.) ಆ್ಯಂಕರ್ : ನಗರಸಭೆ ಆವರಣದಲ್ಲಿ 292ನೇ ದಿನದಲ್ಲಿ ಬಲ್ಡೋಟ ವಿರೋಧಿಸಿ, ಕಾರ್ಖಾನೆ ಮಾಲಿನ್ಯ ತೊಲಗಿಸಿ ಧರಣಿ ಮುಂದುವರೆಯಿತು. ಇದೇ 26ರಂದು ಧರಣಿ 300ನೇ ದಿನ ತಲುಪುತ್ತದೆ. ಅಂದು ಪ್ರವಾದಿ ಮಹ್ಮದ್ ಪೈಗಂಬರರ ಜನ್ಮದಿನವಾಗಿದ್ದು, ಮುಸ್ಲಿಂ ಸಮುದಾಯದ ಬಾಂಧವರು ಈದ್ ಮಿಲ
ಬಲ್ಡೋಟ ಸ್ಥಾಪನೆ ವಿರೋಧಿಸಿ 301ನೇ ದಿನ `ಶಾಸಕರ ಮನೆ ಕಡೆ'


ಬಲ್ಡೋಟ ಸ್ಥಾಪನೆ ವಿರೋಧಿಸಿ 301ನೇ ದಿನ `ಶಾಸಕರ ಮನೆ ಕಡೆ'


ಬಲ್ಡೋಟ ಸ್ಥಾಪನೆ ವಿರೋಧಿಸಿ 301ನೇ ದಿನ `ಶಾಸಕರ ಮನೆ ಕಡೆ'


ಕೊಪ್ಪಳ, 18 ಆಗಸ್ಟ್ (ಹಿ.ಸ.)

ಆ್ಯಂಕರ್ : ನಗರಸಭೆ ಆವರಣದಲ್ಲಿ 292ನೇ ದಿನದಲ್ಲಿ ಬಲ್ಡೋಟ ವಿರೋಧಿಸಿ, ಕಾರ್ಖಾನೆ ಮಾಲಿನ್ಯ ತೊಲಗಿಸಿ ಧರಣಿ ಮುಂದುವರೆಯಿತು. ಇದೇ 26ರಂದು ಧರಣಿ 300ನೇ ದಿನ ತಲುಪುತ್ತದೆ.

ಅಂದು ಪ್ರವಾದಿ ಮಹ್ಮದ್ ಪೈಗಂಬರರ ಜನ್ಮದಿನವಾಗಿದ್ದು, ಮುಸ್ಲಿಂ ಸಮುದಾಯದ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ. ಅವರ ಭಕ್ತಿಭಾವದ ಈ ಹಬ್ಬದ ಆಚರಣೆಯನ್ನು ಸರ್ವ ಸಮಾಜದ ಜನರೂ ಗೌರವಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ವಿಶ್ವಕ್ಕೆ ಶಾಂತಿ ಸಾರಿದ ಮಹಾ ಮಾನವತಾವಾದಿ ಪ್ರವಾದಿ ಪೈಗಂಬರರ ಸಂದೇಶಗಳು ಸಕಲ ಜೀವಾತ್ಮರಿಗೂ ಲೇಸನೆ ಬಯಸಿ ಪ್ರಕೃತಿ ಧರ್ಮ ಅತ್ಯಂತ ದೊಡ್ಡದು ಎಂದು ಹೇಳಿವೆ. ಈ ವೇದಿಕೆ ಕೂಡ ಪರಿಸರ, ಆರೋಗ್ಯ ಸಂರಕ್ಷಣೆ ಮಾಡುವಂತೆ ಹೋರಾಡುತ್ತಿದ್ದು ಅದೇ ದಿನ ನಡೆಯಬೇಕಿದ್ದ ವಿಶೇಷ ಹೋರಾಟ 301ನೇ ದಿನಕ್ಕೆ ಅಂದರೆ 27.08.2026 ಗುರುವಾರ ಹೋರಾಟದ ನಡೆ ಶಾಸಕರ ಮನೆ ಕಡೆ ನಡೆಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ತೀರ್ಮಾನಿಸಿದೆ.

ಈ ವಿಶೇಷ ಹೋರಾಟದಲ್ಲಿ ನಗರದ ನಾಗರಿಕರು, ಬಾಧಿತ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯಿಂದ ಮನವಿ ಮಾಡಲಾಗಿದೆ.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಭಾವಿ, ಶಿವಾನಂದಯ್ಯ ಬೀಳಗಿಮಠ, ಮುತ್ತಣ್ಣ ಕುರಿ ಬಿಕನಹಳ್ಳಿ, ಶಿವಪ್ಪ ಹಲಗೇರಿ, ಜಯಶ್ರೀ ಮುಂತಾದವರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande