ಉದ್ಯೋಗ ಪುನರ್ವಸತಿ ಕಾಯ್ದೆ ಕುರಿತು ಆ.20 ರಂದು ಜಾಗೃತಿ ಸಭೆ
ಬಳ್ಳಾರಿ, 18 ಆಗಸ್ಟ್ (ಹಿ.ಸ.) ಆ್ಯಂಕರ್ : ಮಲ ಹೊರುವ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಅವರ ಉದ್ಯೋಗ ಪುನರ್ವಸತಿ ಕಾಯ್ದೆ 2013’ ಅನುಷ್ಠಾನ ಹಾಗೂ ಜಾಗೃತಿ ಕುರಿತಂತೆ ಚರ್ಚಿಸಲು ಆಗಸ್ಟ್ 20 ರಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಳ್ಳಾರಿಯ ಉಪ ವಿಭಾಗ ಮಟ್ಟದ ತ್ರೆಮಾಸಿಕ ಜಾಗೃ
ಉದ್ಯೋಗ ಪುನರ್ವಸತಿ ಕಾಯ್ದೆ ಕುರಿತು ಆ.20 ರಂದು ಜಾಗೃತಿ ಸಭೆ


ಬಳ್ಳಾರಿ, 18 ಆಗಸ್ಟ್ (ಹಿ.ಸ.)

ಆ್ಯಂಕರ್ : ಮಲ ಹೊರುವ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಅವರ ಉದ್ಯೋಗ ಪುನರ್ವಸತಿ ಕಾಯ್ದೆ 2013’ ಅನುಷ್ಠಾನ ಹಾಗೂ ಜಾಗೃತಿ ಕುರಿತಂತೆ ಚರ್ಚಿಸಲು ಆಗಸ್ಟ್ 20 ರಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಳ್ಳಾರಿಯ ಉಪ ವಿಭಾಗ ಮಟ್ಟದ ತ್ರೆಮಾಸಿಕ ಜಾಗೃತಿ ಸಮಿತಿಯ ಸಭೆ ಆಯೋಜಿಸಲಾಗಿದೆ.

ಉಪವಿಭಾಗ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರೂ ಆಗಿರುವ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಈ ಸಮಿತಿ ಸಭೆಗೆ ಸಮಿತಿಯ ಸದಸ್ಯರು/ಅಧಿಕಾರಿ ವರ್ಗದವರು ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande