ಬಿಡದಿ ಟೌನ್ಶಿಪ್ ಯೋಜನೆಗೆ 7,431 ಎಕರೆ ಭೂಸ್ವಾಧೀನ ಪ್ರಸ್ತಾವ
ಕೃಷಿ ಭೂಮಿ ಉಳಿಸುವಂತೆ ರೈತರಿಂದ ಆಗ್ರಹ
ಬಿಡದಿ ಟೌನ್ಶಿಪ್ ಯೋಜನೆಗೆ 7,431 ಎಕರೆ ಭೂಸ್ವಾಧೀನ ಪ್ರಸ್ತಾವ


ಬೆಂಗಳೂರು, 18 ಆಗಸ್ಟ್ (ಹಿ.ಸ.):

ಆ್ಯoಕರ್:

ಬಹುಚರ್ಚಿತ ಬಿಡದಿ ಸ್ಮಾರ್ಟ್ ಟೌನ್ಶಿಪ್ ನಿರ್ಮಾಣ ಕಾಮಗಾರಿಗೆ ಮತ್ತೊಮ್ಮೆ ಭೂಸ್ವಾಧೀನ ಪ್ರಕ್ರಿಯೆ ಮುನ್ನೆಲೆಗೆ ಬಂದಿದ್ದು, ಯೋಜನೆ ಪ್ರದೇಶದ ಸುತ್ತಮುತ್ತಲಿನ 9 ಹಳ್ಳಿಗಳ ರೈತರು ಹಾಗೂ ಸ್ಥಳೀಯ ಜನತೆಯಲ್ಲಿ ಆತಂಕ ಮೂಡಿಸಿದೆ. ಬಿಡದಿ ಟೌನ್ಶಿಪ್ ನಿರ್ಮಾಣ ಒಟ್ಟು 7,431 ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

ಪ್ರಸ್ತಾವಿತ ಭೂಸ್ವಾಧೀನ ಪ್ರದೇಶದಲ್ಲಿ ಬರುವ 9 ಗ್ರಾಮಗಳ ವ್ಯಾಪ್ತಿಯಲ್ಲಿ ಫಲವತ್ತಾದ ಕೃಷಿ ಭೂಮಿ ಇದೆ. ಈ ಭಾಗದ ಬಹುಪಾಲು ಕುಟುಂಬಗಳು ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆಯನ್ನು ತಮ್ಮ ಮುಖ್ಯ ಕಸುಬಾಗಿ ಅವಲಂಬಿಸಿ ಬದುಕು ನಡೆಸುತ್ತಿವೆ. ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಗ್ರಾಮೀಣ ಆರ್ಥಿಕತೆ ಕುಸಿದು ನೂರಾರು ಕುಟುಂಬಗಳು ಬೀದಿಗೆ ಬೀಳುವ ಭೀತಿ ಎದುರಾಗಿದೆ.ಅದಲ್ಲದೆ, ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಈ ಪ್ರದೇಶದಲ್ಲಿ ಸುಮಾರು 12,400ಕ್ಕೂ ಅಧಿಕ ಮರಗಳನ್ನು ಒಳಗೊಂಡಿರುವ ಅರಣ್ಯೀಕರಣ ಪ್ರದೇಶವಿದ್ದು, ಇದು ಸ್ಥಳೀಯ ಪರಿಸರ ಮತ್ತು ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪರಿಸರಾಸಕ್ತರು ಕಳವಳ ವ್ಯಕ್ತಪಡಿಸಿದ್ದಾರೆ.

----------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande