
ಬೆಂಗಳೂರು , 17 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ 'ವಿದ್ಯಾವಿಕಾಸ ಯೋಜನೆ' ಉಚಿತವಾಗಿ ಶೂ, ಸ್ಯಾಂಡಲ್ಗಳನ್ನು ಆಗಸ್ಟ್ ಅಂತ್ಯದೊಳಗಾಗಿ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2026-27ನೇ ಶೈಕ್ಷಣಿಕ ಒಟ್ಟು ಸಾಲಿನಲ್ಲಿ 104 ಕೋಟಿ ರೂಪಾಯಿಯಲ್ಲಿ 1 ರಿಂದ 10ನೇ ತರಗತಿಯ ಅಂದಾಜು 36.56 ಲಕ್ಷ ಇವುಗಳನ್ನು ಪೂರೈಸಲಾಗುತ್ತಿದೆ.ಒಟ್ಟು 36,61,267 ಸೆಟ್ಗಳ ಪೂರೈಕೆಗೆ ಕಾರ್ಯಾದೇಶ ನೀಡಲಾಗುವುದು,
21,92,529 ಸೆಟ್ಗಳು ಶಾಲೆಗಳಿಗೆ ತಲುಪಿ ವಿತರಣೆಯಾಗಿವೆ. 12.59 ಲಕ್ಷ ಸೆಟ್ಗಳಿಗೆ ರವಾನೆಯಾಗುತ್ತಿದೆ, 2.09 ಲಕ್ಷ ಸೆಟ್ಗಳು ಉತ್ಪಾದನಾ ಹಂತದಲ್ಲಿವೆ. ಕರಾವಳಿ ಹಾಗೂ ಮಲೆನಾಡಿನಂತಹ ಅಧಿಕ ಮಳೆಬೀಳುವ ಪ್ರದೇಶಗಳ ಶಾಲೆಗಳಿಗೆ ಶೂಗಳಿಗೆ ಬದಲಾಗಿ ಬಾಳಿಕೆ ಬರುವ 'ವ್ಯಾಲ್ಕ್ರೋ ಸ್ಯಾಂಡಲ್' ಪೂರೈಸಲಾಗುತ್ತಿದೆ ಎಂದು ವಿವರಿಸಿದರು.
ನಿಗದಿತ 60 ದಿನಗಳಲ್ಲಿ ಸರಬರಾಜು ಪೂರ್ಣಗೊಳಿಸದಿದ್ದರೆ ಶೇ. 0.75 ರಷ್ಟು ವಿಳಂಬ ದಂಡ ವಿಧಿಸಲಾಗುವುದು. ಜುಲೈ 31ರವರೆಗೆ ದಾಖಲಾತಿ ಪ್ರಕ್ರಿಯೆ ನಡೆದಿದ್ದರಿಂದ ಕಾಲಳತೆ ಸಂಗ್ರಹದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಆಗಸ್ಟ್ ಅಂತ್ಯದೊಳಗೆ ಎಲ್ಲಾ ಅರ್ಹ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ಸಿಗಲಿದೆ ಎಂದು ತಿಳಿಸಿದರು.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R