ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ಕೌಶಲ್ಯ ಅಗತ್ಯ ; ಪ್ರೊ.ಪುಷ್ಪ
ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ಕೌಶಲ್ಯ ಅಗತ್ಯ ; ಪ್ರೊ.ಪುಷ್ಪ
ಕೋಲಾರದ ಬೆಂಗಳೂರು ಉತ್ತರ ವಿಶ್ವಾವಿದ್ಯಾಲಯದಿಂದ ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಎಂ ಉಷಾ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ಶ್ರಿನಿವಾಸಪುರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಪುಷ್ಪ ಉದ್ಘಾಟಿಸಿದರು.


ಕೋಲಾರ, ಆಗಸ್ಟ್ ೧೭ (ಹಿ.ಸ.):

ಆ್ಯಂಕರ್ : ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಸ್ವಯಂ ರಕ್ಷಣಾ ಕೌಶಲ್ಯ ತಂತ್ರಗಳು ಅವರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಎದುರಾಗುವ ಅಡಚಣೆ,ಆಕ್ಷೇಪಗಳನ್ನು ಮೆಟ್ಟಿನಿಂತು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲೆಯ ಶ್ರಿನಿವಾಸಪುರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಪುಷ್ಪ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವಾವಿದ್ಯಾಲಯದ ಆಶ್ರಯದಲ್ಲಿ ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಎಂ ಉಷಾ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬಹುಶಿಸ್ತಿನ ಮಾದರಿಗಳ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಸ್ವಯಂ ರಕ್ಷಣಾ ತಂತ್ರಗಳನ್ನು ಕಲಿಯಬೇಕು, ಇಲ್ಲವಾದಲ್ಲಿ ಅವರ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ತಲೆಭಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕರಾಟೆ ಮತ್ತಿತರ ಸ್ವಯಂ ರಕ್ಷಣಾ ಕಲೆಗಳನ್ನು ಅಭ್ಯಾಸ ಮಾಡಿ ಉತ್ತಮ ಬದುಕು ರೂಪಿಸಿಕೊಳ್ಳಿ. ಹೆಣ್ಣುಮಕ್ಕಳಿಗೆ ಸಮಾಜ ಸಮಾನ ಸ್ಥಾನ ಮಾನ ನೀಡಿದೆ ಅವರೂ ಸಹಾ ತಮ್ಮ ಆತ್ಮರಕ್ಷಣೆಗೆ ಕರಾಟೆ ಕಲೆ ಕಲಿತು ಸಮಾಜದಲ್ಲಿ ಧೈರ್ಯದಿಂದ ಜೀವನ ನಡೆಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದ ಅವರು, ಗಂಡು ಮಕ್ಕಳು ಇಂದೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಅವರಿಗೂ ಸ್ವಯಂ ರಕ್ಷಣಾ ಕೌಶಲ್ಯದ ಅಗತ್ಯವಿದೆ. ಸಮಾಜದಲ್ಲಿ ಸಮಾನತೆ, ಕಾನೂನುಗಳ ರಕ್ಷಣೆಯ ಮಾತುಗಳು ಸಾಮಾನ್ಯವಾದರೂ ದೌರ್ಜನ್ಯಕ್ಕೆ ಒಳಗಾದ ನಂತರ ಪರಿಹಾರ ಕಂಡುಕೊಳ್ಳಲು ಮಾತ್ರ ಇವುಗಳಿಂದ ಸಾಧ್ಯ ಎಂದ ಅವರು, ನೀವು ತುರ್ತು ಸಂದರ್ಭದಲ್ಲಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳುವ ಶಕ್ತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕರಾಟೆ ಆತ್ಮರಕ್ಷಣೆಯ ಕಲೆಯಾಗಿದ್ದು, ನೀವು ಯಾರಿಂದಲಾದರೂ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅವರ ವಿರುದ್ದ ಧೈರ್ಯದಿಂದ ಮೆಟ್ಟಿನಿಲ್ಲಲು ಈ ಕಲೆ ಬಳಸಬೇಕು, ಹೆಣ್ಣು ಮಕ್ಕಳು ಇಂದು ಎಲ್ಲಾ ರಂಗಗಳಲ್ಲೂ ತಮ್ಮ ಶಕ್ತಿ ತೋರಿದ್ದಾರೆ, ಶೈಕ್ಷಣಿಕವಾಗಿ ಮಾತ್ರವಲ್ಲ ಕಾರ್ಯಾಂಗ, ಸೇನೆ, ಪೊಲೀಸ್ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದಾರೆ. ಈ ಬಗೆಯ ಕೌಶಲ್ಯಗಳು ವಿದ್ಯಾರ್ಥಿ ಬದುಕಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಹೊಸ ಬಗೆಯ ಕಾರ್ಯಕ್ರಮಗಳನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪರಿಚಯಿಸುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಅವರು ಧನ್ಯವಾದ ಸಲ್ಲಿಸಿದರು.

ಪಿಎಂ. ಉಷಾ ಯೋಜನೆಯ ಕಾಲೇಜು ಸಂಚಾಲಕ ಡಾ. ಮುನಿರಾಜು. ಜಿ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ, ಸ್ವರೂಪ ಮತ್ತು ಪ್ರಯೋಜನಗಳನ್ನು ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಪಿಎಂ ಉಷಾ ನೋಡಲ್ ಅಧಿಕಾರಿ ಡಾ.ರಮೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರತಿನಿಧಿ ಡಾ.ಅಮರಾವತಿ, ಕಾರ್ಯಕ್ರಮ ಅಧಿಕಾರಿ ನರಸಿಂಹಮೂರ್ತಿ. ಟಿ, ಶ್ರೀ ಲೋಕೇಶ್. ಜೆ. ಎನ್.ಡಾ. ಶಾರದಾ. ಕೆ, ಐಕ್ಯೂಎ ಸಿ ಸಂಚಾಲಕರಾದ, ಡಾ ದಿನೇಶ್, ರತ್ನಮ್ಮ,ಶಾಮಲಾ, ವೇದಶ್ರೀ, ಮ್ಯಾನೇಜರ್ ವಿಜಯ್ ಕುಮಾರ್, ಡಾ. ಮೃತ್ಯುಂಜಯ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande