ಕಿತ್ತೂರು ಚೆನ್ನಮ್ಮ ಕುರಿತು ಪುಟ್ಟ ಬಾಲಕಿಯ ಭಾಷಣಕ್ಕೆ ಮೆಚ್ಚುಗೆ
ವಿಜಯಪುರ, 17 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಗರದ ಸಾಯಿನಗರದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪುಟ್ಟ ಬಾಲಕಿ ಸಾಹಿತ್ಯ ನಿಮಾದಾರ ಅವರು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಕುರಿತು ಮಾಡಿದ ಭಾಷಣ ಎಲ್ಲರ ಗಮನ ಸೆಳೆಯಿತು. ಕಾರ್ಯಕರ್ತ ವೀರ
ಭಾಷಣ


ವಿಜಯಪುರ, 17 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಗರದ ಸಾಯಿನಗರದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪುಟ್ಟ ಬಾಲಕಿ ಸಾಹಿತ್ಯ ನಿಮಾದಾರ ಅವರು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಕುರಿತು ಮಾಡಿದ ಭಾಷಣ ಎಲ್ಲರ ಗಮನ ಸೆಳೆಯಿತು.

ಕಾರ್ಯಕರ್ತ ವೀರಣ್ಣ ನಿಮಾದಾರ ಅವರ ಪುತ್ರಿ ಸಾಹಿತ್ಯ ನಿಮಾದಾರ, ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜೀವನ, ಹೋರಾಟ, ಧೈರ್ಯ, ಸಾಹಸ ಹಾಗೂ ದೇಶಪ್ರೇಮದ ಕುರಿತು ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡಿದರು. ಪುಟ್ಟ ವಯಸ್ಸಿನಲ್ಲಿಯೇ ನಾಡಿನ ಇತಿಹಾಸದ ಬಗ್ಗೆ ಸಾಹಿತ್ಯ ಹೊಂದಿರುವ ಆಸಕ್ತಿ ಹಾಗೂ ಚೆನ್ನಮ್ಮ ಅವರ ಸಾಹಸಗಾಥೆಯನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದ ರೀತಿ ಕಾರ್ಯಕ್ರಮದಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ಬ್ರಿಟಿಷರ ವಿರುದ್ಧ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಶೌರ್ಯವನ್ನು ಸ್ಮರಿಸಿದ ಸಾಹಿತ್ಯ, ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಜೀವನದಿಂದ ಇಂದಿನ ಪೀಳಿಗೆಯ ಮಕ್ಕಳು ಸ್ಫೂರ್ತಿ ಪಡೆಯಬೇಕು ಎಂಬ ಸಂದೇಶವನ್ನು ತಮ್ಮ ಪುಟ್ಟ ಭಾಷಣದಲ್ಲಿ ಸಾರಿದರು.

ಸಾಹಿತ್ಯಳ ಮಾತುಗಳನ್ನು ಆಲಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಲಕಿಯ ಆತ್ಮವಿಶ್ವಾಸ ಹಾಗೂ ಇತಿಹಾಸದ ಅರಿವನ್ನು ಮೆಚ್ಚಿ ಅಭಿನಂದಿಸಿದರು. ಪುಟ್ಟ ವಯಸ್ಸಿನಲ್ಲಿಯೇ ಕಿತ್ತೂರು ಚೆನ್ನಮ್ಮ ಅವರಂತಹ ವೀರ ಮಹಿಳೆಯರ ಜೀವನಗಾಥೆಯನ್ನು ತಿಳಿದುಕೊಂಡು ಮಾತನಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯತ್ನಾಳ್ ಪ್ರಶಂಸೆ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ದೇಶಪ್ರೇಮದ ಕುರಿತು ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ಇತಿಹಾಸದ ಮಹನೀಯರು ಹಾಗೂ ವೀರರ ಜೀವನಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ, ದೇಶಾಭಿಮಾನ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಭಾವನೆ ಬೆಳೆಸಬಹುದು ಎಂಬುದಕ್ಕೆ ಸಾಹಿತ್ಯಳ ಭಾಷಣ ಉತ್ತಮ ಉದಾಹರಣೆಯಾಯಿತು.

ಸಾಹಿತ್ಯಳ ಭಾಷಣವನ್ನು ಕುಟುಂಬಸ್ಥರು, ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದ ಗಣ್ಯರು ಆಸಕ್ತಿಯಿಂದ ಆಲಿಸಿದರು. ಪುಟ್ಟ ಬಾಲಕಿಯ ಮಾತುಗಳಲ್ಲಿ ವ್ಯಕ್ತವಾದ ಕಿತ್ತೂರು ಚೆನ್ನಮ್ಮ ಅವರ ಮೇಲಿನ ಗೌರವ ಮತ್ತು ದೇಶಪ್ರೇಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande