
ಬಳ್ಳಾರಿ, 17 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರದ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕರ (ತನಿಖೆ) ಕಚೇರಿಯು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಇಲ್ಲಿಯವರೆಗೆ ಇನ್ಫೆಂಟ್ರಿ ರಸ್ತೆಯ ಸಂಜಯ್ ಗಾಂಧಿ ನಗರದಲ್ಲಿರುವ (ಅಗ್ನಿಶಾಮಕ ಠಾಣೆ ಎದುರು) ಸುರೇಶ್ ಕಾಂಪ್ಲೆಕ್ಸ್ನ 2ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕಚೇರಿಯನ್ನು, ಇನ್ಫೆಂಟ್ರಿ ರಸ್ತೆಯ ನೇತಾಜಿ ನಗರದ ಕೆ.ಎಚ್.ಬಿ ಕಾಲೋನಿಯ (ವಾರ್ಡ್ ನಂ. 25) ಎ.ಬಿ.ಆರ್ ಕಾಂಪ್ಲೆಕ್ಸ್ನ 3ನೇ ಮಹಡಿಗೆ ಸ್ಥಳಾಂತರಿಸಲಾಗಿದೆ.
ಅಂದು ನಡೆಯುವ ಸಮಾರಂಭದಲ್ಲಿ ಪಣಜಿಯ ಆದಾಯ ತೆರಿಗೆ (ತನಿಖೆ) ಪ್ರಧಾನ ನಿರ್ದೇಶಕ ರಾಹುಲ್ ಗರ್ಗ್ ಅವರು ನೂತನ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸುವರು.
ಹುಬ್ಬಳ್ಳಿಯ ಆದಾಯ ತೆರಿಗೆ (ತನಿಖೆ) ಜಂಟಿ ನಿರ್ದೇಶಕ ಭರತ್ ಆರ್., ಬಳ್ಳಾರಿಯ ಆದಾಯ ತೆರಿಗೆ ಸಹಾಯಕ ನಿರ್ದೇಶಕ(ತನಿಖೆ) ಎ.ಪಿ. ವಿಜಯ್ ಚಂದ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿರುವರು ಎಂದು ಬಳ್ಳಾರಿಯ ಆದಾಯ ತೆರಿಗೆ ಸಹಾಯಕ ನಿರ್ದೇಶಕ(ತನಿಖೆ) ಎ.ಪಿ. ವಿಜಯ್ ಚಂದ್ರ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್