ಇಳಕಲ್ಲ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: 18 ಮೇಕೆ-ಟಗರು, 14 ಮೊಬೈಲ್ಗಳು ಪತ್ತೆ
ಬಾಗಲಕೋಟೆ, 17 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 11 ಮೇಕೆಗಳು ಹಾಗೂ 7 ಟಗರುಗಳು ಸೇರಿದಂತೆ ಒಟ್ಟು 18 ಜಾನುವಾರುಗಳು ಮತ್ತು 14 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ವಾರಸುದಾರರಿಗೆ ಹಸ್
ಕಳ್ಳತನ


ಬಾಗಲಕೋಟೆ, 17 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 11 ಮೇಕೆಗಳು ಹಾಗೂ 7 ಟಗರುಗಳು ಸೇರಿದಂತೆ ಒಟ್ಟು 18 ಜಾನುವಾರುಗಳು ಮತ್ತು 14 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ತಾಲೂಕಿನ ಸೋಮಲಾಪೂರ ಗ್ರಾಮದ ನಾಗಪ್ಪ ವೀರಭದ್ರಪ್ಪ ಚಲವಾದಿ ಹಾಗೂ ಕೋಡಿಹಾಳ ಗ್ರಾಮದ ಶರೀಫ್ ಚಿತ್ತುಸಾಬ ಶೇಖದಾರ ಅವರು ತಮ್ಮ ಮೇಕೆ ಮತ್ತು ಟಗರುಗಳು ಕಳ್ಳತನವಾಗಿರುವ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು.

ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಂಶಯಾಸ್ಪದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸೋಮಲಾಪೂರ ಹಾಗೂ ಕೋಡಿಹಾಳ ಗ್ರಾಮಗಳಲ್ಲಿ ಒಟ್ಟು 18 ಮೇಕೆ ಮತ್ತು ಟಗರುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಸೋಮಲಾಪೂರ ಗ್ರಾಮದ ನಾಗಪ್ಪ ವೀರಭದ್ರಪ್ಪ ಚಲವಾದಿ ಅವರಿಗೆ ಸೇರಿದ 11 ಮೇಕೆಗಳು ಹಾಗೂ ಕೋಡಿಹಾಳ ಗ್ರಾಮದ ಶರೀಫ್ ಚಿತ್ತುಸಾಬ ಶೇಖದಾರ ಅವರಿಗೆ ಸೇರಿದ 7 ಟಗರುಗಳನ್ನು ಪತ್ತೆಹಚ್ಚಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪತ್ತೆಯಾದ ಜಾನುವಾರುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

14 ಕಳ್ಳತನದ ಮೊಬೈಲ್ಗಳೂ ಪತ್ತೆ

ಇದೇ ವೇಳೆ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಕಳ್ಳತನವಾಗಿದ್ದ ಮೊಬೈಲ್ ಫೋನ್ಗಳ ಪತ್ತೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಇಐಆರ್ ಪೋರ್ಟಲ್ನ ಸಹಾಯದಿಂದ ತಾಂತ್ರಿಕವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳತನವಾಗಿದ್ದ 14 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ.

ಪತ್ತೆಯಾದ ಮೊಬೈಲ್ ಫೋನ್ಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಹುನಗುಂದ ಡಿವೈಎಸ್ಪಿ ಸಂತೋಷ ಬನ್ನಟ್ಟಿ ಅವರು ಪತ್ತೆಯಾದ ಮೊಬೈಲ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.

ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ತನಿಖೆ ನಡೆಸಿ ಜಾನುವಾರುಗಳು ಹಾಗೂ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿರುವ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕಾರ್ಯಾಚರಣೆಯು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ. ಹಾಗೂ ಹುನಗುಂದ ಉಪವಿಭಾಗದ ಡಿವೈಎಸ್ಪಿ ಸಂತೋಷ ಬನ್ನಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಹುನಗುಂದ ಸಿಪಿಐ ಎಸ್.ಬಿ. ಅಜೂರ ಅವರ ನೇತೃತ್ವದಲ್ಲಿ ಪಿಎಸ್ಐ ಎಸ್.ಆರ್. ನಾಯಕ್, ಮಲ್ಲಿಕಾರ್ಜುನ ಸತ್ತಿಗೌಡರ, ರಜಾಕ್ ಗುಡದಾರಿ, ಅಮರೇಶ ಗ್ಯಾರೆಡ್ಡೆರ, ಬಿ.ಎ. ವಾಲ್ಮೀಕಿ, ಶಾಲಂ ಕೆ., ಮುತ್ತು ಕೆಂಜೋಡಿ, ಆನಂದ ಗೊಲ್ಲಪ್ಪನವರ, ಗಣೇಶ ಪವಾರ, ಬುಡ್ಡಾ ವಾಲಿಕಾರ, ಅಜೀಜ್ ಒಂಟಿ ಹಾಗೂ ಖಾದರ ಕಲಬುರಗಿ ಸೇರಿದಂತೆ ಪೊಲೀಸ್ ಸಿಬ್ಬಂದಿಯ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande