ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಲು ಶಾಸಕ ನಂಜೇಗೌಡ ಕರೆ
ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಲು ಶಾಸಕ ನಂಜೇಗೌಡ ಕರೆ
ಮಾಲೂರು ತಾಲ್ಲೂಕಿನ ಕೆಜಿ ಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ತಾಯಿಬೇರು ಜಾನಪದ ಕಲಾ ತಂಡದಿAದ ನಡೆದ ಜಾನಪದ ಉತ್ಸವದಲ್ಲಿ ಡೊಳ್ಳು ಕುಣಿತ ಕಲಾವಿದರು ಪ್ರದರ್ಶನ ನೀಡಿದರು.


ಕೋಲಾರ, ೧೭ ಆಗಸ್ಟ್ (ಹಿ.ಸ.)

ಆಂಕರ್ : ಜಾನಪದ ಸಂಗೀತ ಮತ್ತು ಕಲೆಗಳು ಮನುಷ್ಯನ ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡುತ್ತವೆ. ಜಾನಪದ ಕಲೆಗಳು ನೇಪತ್ಯಕ್ಕೆ ಸರಿಯದಂತೆ ಪ್ರೋತ್ಸಾಹ ನೀಡಬೇಕೆಂದು ಮಾಲೂರು ಕ್ಷೇತ್ರದ ಶಾಸಕರಾದ ಕೆ.ವೈ. ನಂಜೇಗೌಡ ಕರೆ ನೀಡಿದರು.

ಮಾಲೂರು ತಾಲ್ಲೂಕಿನ ಕೆ.ಜಿ. ಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ತಾಯಿಬೇರು ಜಾನಪದ ಕಲಾ ತಂಡ ದೊಡ್ಡಮಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜಾನಪದ ಉತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎ.ಕೆ. ವೆಂಕಟೇಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಕೋಲಾಟ, ತಮಟೆವಾದನ, ಜಾನಪದ ಗಾಯನ, ಸುಗಮ ಸಂಗೀತ ಹಾಗೂ ಜಾನಪದ ನೃತ್ಯ ಪ್ರದರ್ಶಿಸಲಾಗಿಯಿತು. ಸಂಸ್ಥೆಯ ಅಧ್ಯಕ್ಷ ದೊಡ್ಡಮಲ್ಲೆ ರವಿ ಕಾರ್ಯಕ್ರಮ ರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande