
ಬಳ್ಳಾರಿ, 17 ಆಗಸ್ಟ್ (ಹಿ.ಸ.)
ಆ್ಯಂಕರ್ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ಕಾರ್ಯಕ್ರಮದಡಿ ಆಗಸ್ಟ್ 27 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಿವಿಧೆಡೆ ಈ ಕಾರ್ಯಕ್ರಮ ಜರುಗಲಿದೆ.
*ಕಾರ್ಯಕ್ರಮ ನಡೆಯುವ ಸ್ಥಳಗಳ ವಿವರ:*
ಬಳ್ಳಾರಿ ಜಿಲ್ಲೆ: ಎ-1 ಸ್ಟೀಲ್ಸ್ ಇಂಡಿಯಾ ಲಿಮಿಟೆಡ್, ಬಳ್ಳಾರಿ.
ವಿಜಯನಗರ ಜಿಲ್ಲೆ: ಮುನೀರ್ ಲಿಮಿಟೆಡ್, ವಿಜಯನಗರ.
ಕೊಪ್ಪಳ ಜಿಲ್ಲೆ: ಎಸ್ ಎಫ್ ಎಸ್ ಸ್ಕೂಲ್, ಕೊಪ್ಪಳ.
ಚಿತ್ರದುರ್ಗ ಜಿಲ್ಲೆ: ಗಂಗಾ ಕಾವೇರಿ ಎಜ್ಯುಕೇಶನಲ್ ಟ್ರಸ್ಟ್, ಹಿರಿಯೂರು, ಚಿತ್ರದುರ್ಗ.
ಈ ಕಾರ್ಯಕ್ರಮವು ಕಾರ್ಮಿಕರು, ಪಿಂಚಣಿದಾರರು ಹಾಗೂ ಉದ್ಯೋಗದಾತರ ಕುಂದು-ಕೊರತೆಗಳನ್ನು ಪರಿಹರಿಸಲು ಮತ್ತು ಪರಸ್ಪರ ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವ ವಿಶಾಲ ವೇದಿಕೆಯಾಗಿದೆ. ಉದ್ಯೋಗದಾತರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವುದು.
ಕಾರ್ಮಿಕರಿಗೆ, ಉದ್ಯೋಗದಾತರಿಗೆ ಹಾಗೂ ಗುತ್ತಿಗೆದಾರರಿಗೆ ಲಭ್ಯವಿರುವ ಪ್ರಮುಖ ಆನ್ಲೈನ್ ಸೇವೆಗಳು ಮತ್ತು ಇತ್ತೀಚಿನ ಸುಧಾರಣೆಗಳು/ಹೊಸ ಉಪಕ್ರಮಗಳ ಮಾಹಿತಿಯನ್ನು ಒದಗಿಸಲಾಗುವುದು.
ಹಾಗಾಗಿ ಸಂಬಂಧಪಟ್ಟ ಎಲ್ಲಾ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರು ಆಗಸ್ಟ್ 27 ರಂದು ತಮ್ಮ ಸಮೀಪದ ಸ್ಥಳಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ. ವಿ. ಪ್ರವೀಣ್ ಅವರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್