ತುಂಗಭದ್ರಾ ಕಾಲುವೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಬಿಜೆಪಿ ಆಗ್ರಹ
ಬಳ್ಳಾರಿ, 17 ಆಗಸ್ಟ್ (ಹಿ.ಸ.) ಆ್ಯಂಕರ್ : ತುಂಗಭದ್ರ ಜಲಾಶಯದಿಂದ ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ತಕ್ಷಣ ಹೆಚ್ಚಿಸಿ, ಕರ್ನಾಟಕದ ಕೊನೆಯ ಭಾಗದ ಕೃಷಿ ಭೂಮಿಗಳಿಗೆ ನೀರುಣಿಸಲು ನೆರವಾಗಬೇಕು ಎಂದು ಬಿಜೆಪಿಯ ರಾಜ್ಯ ರೈತ ಮೋರ್ಚಾ ಆಗ್ರಹಿಸಿದೆ. ಬಿಜೆ
ಬಿಜೆಪಿ : ಪೂರ್ಣಪ್ರಮಾಣದಲ್ಲಿ ಕಾಲುವೆಗಳಿಗೆ ನೀರು ಹರಿಸಲು ಆಗ್ರಹ


ಬಿಜೆಪಿ : ಪೂರ್ಣಪ್ರಮಾಣದಲ್ಲಿ ಕಾಲುವೆಗಳಿಗೆ ನೀರು ಹರಿಸಲು ಆಗ್ರಹ


ಬಳ್ಳಾರಿ, 17 ಆಗಸ್ಟ್ (ಹಿ.ಸ.)

ಆ್ಯಂಕರ್ : ತುಂಗಭದ್ರ ಜಲಾಶಯದಿಂದ ಎಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ತಕ್ಷಣ ಹೆಚ್ಚಿಸಿ, ಕರ್ನಾಟಕದ ಕೊನೆಯ ಭಾಗದ ಕೃಷಿ ಭೂಮಿಗಳಿಗೆ ನೀರುಣಿಸಲು ನೆರವಾಗಬೇಕು ಎಂದು ಬಿಜೆಪಿಯ ರಾಜ್ಯ ರೈತ ಮೋರ್ಚಾ ಆಗ್ರಹಿಸಿದೆ.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ ಅವರ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಗಸ್ಟ್ 11 ರಿಂದ ತುಂಗಭದ್ರ ಜಲಾಶಯದಿಂದ ಎಚ್ಎಲ್ಸಿ, ಎಲ್ಎಲ್ಸಿ ಕಾಲುವೆಗಳಿಗೆ ಕೇವಲ 3.5 ಅಡಿ ಎತ್ತರದ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಈ ಪ್ರಮಾಣದಲ್ಲಿ ನೀರನ್ನು ಹರಿಸುವುದರಿಂದ ಕರ್ನಾಟಕದ ಕೃಷಿಕರಿಗೆ ಯಾವುದೇ ರೀತಿಯಲ್ಲಿ ಅನುಕೂಲ ಆಗುವುದಿಲ್ಲ. ಕಾರಣ ಸರ್ಕಾರ ಮತ್ತು ತುಂಗಭದ್ರ ಜಲಮಂಡಳಿಯು ತಕ್ಷಣವೇ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆಗಳಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ ಜಿಲ್ಲೆಯ ಕೃಷಿ ಭೂಮಿಗಳಿಗೆ ನೀರು ಪೂರೈಸುವ ಡಿಪಿಗಳು 4 ರಿಂದ 5 ಅಡಿ ಎತ್ತರದಲ್ಲಿವೆ. ಈ ಡಿಪಿಗಳ ಮೂಲಕ ನೀರು ಹರಿಯುತ್ತಿಲ್ಲ. ಅಲ್ಲದೇ, ಕೊನೆಯ ಭಾಗದ ರೈತರಿಗೂ ನೀರು ಸಿಗುತ್ತಿಲ್ಲ. ಕ್ರಸ್ಟ್ಗೇಟ್ಗಳ ದುರಸ್ತಿಯ ಕಾರಣ ಎರಡನೇ ಬೆಳೆಯನ್ನು ಕಳೆದುಕೊಂಡಿದ್ದ ರೈತರು, ಮುಂಗಾರು ವೈಫಲ್ಯದ ಕಾರಣ ಎರಡನೇ ಬೆಳೆ ಬೆಳೆಯಲು ಸಜ್ಜಾಗಿದ್ದರೂ, ನೀರು ನೀಡದೇ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರ ರೈತರ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಆರೋಪಿಸಿದರು.

ಎಚ್ಎಲ್ಸಿ ವಿತರಣಾ ಕಾಲುವೆ ಸಂಖ್ಯೆ 14ರ ವ್ಯಾಪ್ತಿಯ ಎಲ್ಲ ಉಪಕಾಲುವೆಗಳಿಗೆ ಸಮಾನವಾಗಿ ನೀರು ಹಂಚಿಕೆಯಾಗುವ ವ್ಯವಸ್ಥೆ ಮಾಡಬೇಕು.

ಅಗತ್ಯವಿದ್ದಲ್ಲಿ ತಾತ್ಕಾಲಿಕವಾಗಿ ಆದರೂ ಆನ್ ಅಂಡ್ ಆಫ್ ವ್ಯವಸ್ಥೆಯನ್ನು ಜಾರಿ ಮಾಡಿ ಎಲ್ಲಾ ರೈತರಿಗೆ ಸಮರ್ಪಕವಾಗಿ ನೀರು ಪೂರೈಸಬೇಕು.

ತುಂಗಭದ್ರ ಜಲಾಶಯದ ನದಿ ಹಾಗೂ ವೇದಾವತಿ ನದಿ ದಡದ ರೈತರು, ಜಾನುವಾರುಗಳು ಮತ್ತು ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನೂ ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಎಚ್ಎಲ್ಸಿ, ಎಲ್ಎಲ್ಸಿ ಹಾಗೂ ಹಗರಿ (ವೇದಾವತಿ) ಭಾಗದ ರೈತರಿಗೆ ಪೂರ್ಣ ಪ್ರಮಾಣದ ನೀರು ಹರಿಸಲು ಸರ್ಕಾರ ಮತ್ತು ತುಂಗಭದ್ರ

ಮಂಡಳಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಭಾಗದ ಕೃಷಿಕರು ಮತ್ತು ಕೃಷಿ ಕೂಲಿಗಳು ಸರ್ಕಾರದ ವಿರುದ್ಧ ಬಂಡೇಳುವ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಮುಖಂಡರಾದ ಎಚ್.ಆರ್. ಮಲ್ಲಿಗೌಡ, ಬೋಜರಾಜು, ಗಣಪಾಲ್ ಐನಾಥರೆಡ್ಡಿ, ಲೋಕೇಶ್, ವೀರೇಶ್, ವೀರನಗೌಡ, ಬಸವನಗೌಡ, ಸೇರಿದಂತೆ

ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande