ವಿಭಜನೆಯ ಭೀಕರತೆ ಸ್ಮರಣಾ ದಿನ: ರಾಷ್ಟ್ರೀಯ ಭಾವನೆ ಬಲಪಡಿಸಲು ಪ್ರಧಾನಿ ಮೋದಿ ಕರೆ
ನವದೆಹಲಿ, 14 ಆಗಸ್ಟ್ (ಹಿ.ಸ.): ಆ್ಯಂಕರ್:ವಿಭಜನೆಯ ಭೀಕರತೆ ಸ್ಮರಣಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ವಿಭಜನೆಯ ಕರಾಳ ಅವಧಿಯನ್ನು ಎದುರಿಸಿ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರಿಗೂ ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ
प्रधानमंत्री नरेन्द्र मोदी की एक्स पोस्ट।


ನವದೆಹಲಿ, 14 ಆಗಸ್ಟ್ (ಹಿ.ಸ.):

ಆ್ಯಂಕರ್:ವಿಭಜನೆಯ ಭೀಕರತೆ ಸ್ಮರಣಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ವಿಭಜನೆಯ ಕರಾಳ ಅವಧಿಯನ್ನು ಎದುರಿಸಿ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರಿಗೂ ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಂಕಲ್ಪಗಳನ್ನು ಈಡೇರಿಸುವ ಸಾಮರ್ಥ್ಯವನ್ನು ದೇಶವಾಸಿಗಳು ತಮ್ಮ ಧೈರ್ಯ ಮತ್ತು ಶಕ್ತಿಯಿಂದ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಸೌಹಾರ್ದತೆ ಮತ್ತು ಏಕತೆಯ ರಾಷ್ಟ್ರೀಯ ಭಾವನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಕರೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ‘ಸುಭಾಷಿತ’ ಹಂಚಿಕೊಂಡಿದ್ದು, “ಉದ್ಯಮಸ್ಯ ಪ್ರಸಾದೇನ ದೃಶ್ಯಂತೇ ವಿವಿಧಾಃ ಕಲಾಃ। ಕಾತರಾ ಏವ ಜಲ್ಪಂತಿ ಯದ್ಭಾವ್ಯಂ ತದ್ಭವಿಷ್ಯತಿ॥” ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.

ಪರಿಶ್ರಮ, ಉದ್ಯಮ ಮತ್ತು ಪುರುಷಾರ್ಥದಿಂದಲೇ ಕಲೆ, ವಿಜ್ಞಾನ, ತಂತ್ರಜ್ಞಾನ, ಕೌಶಲ್ಯ ಹಾಗೂ ನವೋದ್ಯಮಗಳು ಅಭಿವೃದ್ಧಿಯಾಗುತ್ತವೆ. ಆದ್ದರಿಂದ ಮನುಷ್ಯನು ಕೇವಲ ಅದೃಷ್ಟವನ್ನು ನಂಬದೆ, ಧೈರ್ಯ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದೊಂದಿಗೆ ಗುರಿಯತ್ತ ಸಾಗಬೇಕು. ಪುರುಷಾರ್ಥವೇ ಭಾಗ್ಯವನ್ನು ರೂಪಿಸುತ್ತದೆ ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande