ಕೆನ್–ಬೇತ್ವಾ ಯೋಜನೆ ಬಾಧಿತರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ ರಾಹುಲ್ ಗಾಂಧಿ
ನವದೆಹಲಿ, 13 ಆಗಸ್ಟ್ (ಹಿ.ಸ.): ಆ್ಯಂಕರ್:ಮಧ್ಯಪ್ರದೇಶದ ಕೆನ್–ಬೇತ್ವಾ ನದಿ ಜೋಡಣೆ ಯೋಜನೆಯಿಂದ ಬಾಧಿತರಾಗಿರುವ ಜನರ ಪ್ರತಿನಿಧಿಗಳೊಂದಿಗೆ ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಬಾಧಿತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಭರವ
नई दिल्ली में गुरुवार को केन-बेतवा नदी जोड़ परियोजना से प्रभावित लोगों के प्रतिनिधिमंडल से मुलाकात करते लोकसभा में नेता प्रतिपक्ष राहुल गांधी।


ನವದೆಹಲಿ, 13 ಆಗಸ್ಟ್ (ಹಿ.ಸ.):

ಆ್ಯಂಕರ್:ಮಧ್ಯಪ್ರದೇಶದ ಕೆನ್–ಬೇತ್ವಾ ನದಿ ಜೋಡಣೆ ಯೋಜನೆಯಿಂದ ಬಾಧಿತರಾಗಿರುವ ಜನರ ಪ್ರತಿನಿಧಿಗಳೊಂದಿಗೆ ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಬಾಧಿತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಮಧ್ಯಪ್ರದೇಶದ ಛತ್ತರ್‌ಪುರ ಮತ್ತು ಪನ್ನಾ ಜಿಲ್ಲೆಗಳಲ್ಲಿ ಕೆನ್–ಬೇತ್ವಾ ಯೋಜನೆಯ ವಿರುದ್ಧ ಆದಿವಾಸಿಗಳು, ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಯೋಜನೆಯಿಂದ ತಮ್ಮ ಭೂಮಿ, ಮನೆ ಹಾಗೂ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಬಾಧಿತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಪ್ರತಿನಿಧಿಗಳು ಯೋಜನೆಯಿಂದ ಉಂಟಾಗುವ ಸ್ಥಳಾಂತರ, ಪುನರ್ವಸತಿ ಮತ್ತು ಪರಿಹಾರಧನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸಿದರು. ಪರಿಹಾರಧನ ಪಾವತಿಯಲ್ಲಿ ವಿಳಂಬ, ಸೂಕ್ತ ಪುನರ್ವಸತಿ ವ್ಯವಸ್ಥೆ, ಅರಣ್ಯ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಪ್ರತಿಯೊಬ್ಬ ವಯಸ್ಕನನ್ನೂ ಪ್ರತ್ಯೇಕ ಫಲಾನುಭವಿಯಾಗಿ ಪರಿಗಣಿಸಬೇಕು, ಪರಿಹಾರ ಹಾಗೂ ಪುನರ್ವಸತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು, ಭೂಮಿಗೆ ಬದಲಾಗಿ ಭೂಮಿ ನೀಡಬೇಕು ಹಾಗೂ ಅಗತ್ಯ ಮೂಲಸೌಕರ್ಯಗಳೊಂದಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಬೇಕು ಎಂದು ಬಾಧಿತರು ಒತ್ತಾಯಿಸಿದ್ದಾರೆ. ಗ್ರಾಮಸಭೆ ಹಾಗೂ ಅರಣ್ಯ ಹಕ್ಕು ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ಇದಕ್ಕೂ ಮುನ್ನ ಆಗಸ್ಟ್ 5ರಂದು ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಕೆನ್–ಬೇತ್ವಾ ನದಿ ಜೋಡಣೆ ಯೋಜನೆಯಿಂದ ಬಾಧಿತವಾಗಿರುವ ಆದಿವಾಸಿ ಕುಟುಂಬಗಳ ಸ್ಥಳಾಂತರ ಮತ್ತು ಪುನರ್ವಸತಿ ಕುರಿತು ಪ್ರಶ್ನೆ ಎತ್ತಿದ್ದರು. ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಸಿಂಗ್ ಲೋಧಿ ಅವರೊಂದಿಗೆ ಯೋಜನೆಯಿಂದ ಬಾಧಿತ ಕುಟುಂಬಗಳ ಸಂಖ್ಯೆ ಹಾಗೂ ಪ್ರತಿಭಟನೆ ನಡೆಸುತ್ತಿರುವ ಆದಿವಾಸಿ ಸಮುದಾಯಗಳ ಅಹವಾಲುಗಳ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ಕೋರಿದ್ದರು.

ಇದಕ್ಕೆ ಲಿಖಿತ ಉತ್ತರ ನೀಡಿದ್ದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯ್ಕೆ, ಕೆನ್–ಬೇತ್ವಾ ಯೋಜನೆಯಿಂದ ಉಂಟಾಗುವ ಸ್ಥಳಾಂತರಕ್ಕೆ ಸಂಬಂಧಿಸಿದ ಹಲವು ಮನವಿಗಳು ಸಚಿವಾಲಯಕ್ಕೆ ಬಂದಿವೆ ಎಂದು ತಿಳಿಸಿದ್ದರು. ಮನವಿಗಳನ್ನು ಪರಿಶೀಲಿಸಿದ ಬಳಿಕ ತನಿಖೆ ಹಾಗೂ ಅಗತ್ಯ ಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರ ಮತ್ತು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದರು. ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

ಕೆನ್–ಬೇತ್ವಾ ನದಿ ಜೋಡಣೆ ಯೋಜನೆ ದೇಶದ ಮೊದಲ ನದಿ ಜೋಡಣೆ ಯೋಜನೆಯಾಗಿದೆ. ಯೋಜನೆಯಡಿ ಮಧ್ಯಪ್ರದೇಶದ ಕೆನ್ ನದಿಯ ನೀರನ್ನು ಉತ್ತರ ಪ್ರದೇಶದ ಬೇತ್ವಾ ನದಿಗೆ ಹರಿಸಲು ಉದ್ದೇಶಿಸಲಾಗಿದೆ. ಅಣೆಕಟ್ಟು, ಕಾಲುವೆಗಳು ಹಾಗೂ ಸುರಂಗಗಳ ನಿರ್ಮಾಣ ಯೋಜನೆಯ ಪ್ರಮುಖ ಭಾಗಗಳಾಗಿವೆ.

ಸರ್ಕಾರದ ಪ್ರಕಾರ, ಯೋಜನೆಯಿಂದ ಬುಂದೇಲ್‌ಖಂಡ್ ಪ್ರದೇಶದಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳು ಹೆಚ್ಚಲಿವೆ. ಸುಮಾರು ₹44 ಸಾವಿರ ಕೋಟಿಗೂ ಅಧಿಕ ಅಂದಾಜು ವೆಚ್ಚದ ಯೋಜನೆಯಿಂದ ಸುಮಾರು 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರಿನ ಪ್ರಯೋಜನ ದೊರೆಯಲಿದೆ.

ಆದರೆ ಯೋಜನೆಯಿಂದ ಅಭಿವೃದ್ಧಿಗೆ ವಿರೋಧವಿಲ್ಲ ಎಂದು ಹೇಳುತ್ತಿರುವ ಬಾಧಿತರು, ತಮ್ಮ ಹಕ್ಕುಗಳ ರಕ್ಷಣೆ ಹಾಗೂ ನ್ಯಾಯಯುತ ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಯೋಜನೆಯಿಂದ ಪನ್ನಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಮೇಲೆ ಉಂಟಾಗಬಹುದಾದ ಪರಿಸರ ಪರಿಣಾಮ, ಮರಗಳ ಕಡಿತ ಸೇರಿದಂತೆ ಪರಿಸರ ಸಂಬಂಧಿತ ವಿಚಾರಗಳ ಬಗ್ಗೆಯೂ ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande