ದೃಷ್ಟಿ, ವಿಚಾರ, ವಚನ, ಕರ್ಮದಿಂದ ಜನಮನ ಗೆಲ್ಲುವ ಸಂದೇಶ ನೀಡಿದ ಪ್ರಧಾನಿ ಮೋದಿ
ನವದೆಹಲಿ, 12 ಆಗಸ್ಟ್ (ಹಿ.ಸ.): ಆ್ಯಂಕರ್:ಯುವಕರ ಪಾತ್ರ ಹಾಗೂ ಅವರ ಸೇವಾಭಾವವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ದೊಡ್ಡ ಶಕ್ತಿಯೂ ಆಗಿದ್ದಾರೆ ಎಂದು ಹೇಳಿದ್ದಾರೆ. ಬುಧವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸುಭಾಷಿತವೊಂದನ್ನು ಹಂಚಿಕೊಂಡಿ
प्रधानमंत्री नरेन्द्र


ನವದೆಹಲಿ, 12 ಆಗಸ್ಟ್ (ಹಿ.ಸ.):

ಆ್ಯಂಕರ್:ಯುವಕರ ಪಾತ್ರ ಹಾಗೂ ಅವರ ಸೇವಾಭಾವವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ದೊಡ್ಡ ಶಕ್ತಿಯೂ ಆಗಿದ್ದಾರೆ ಎಂದು ಹೇಳಿದ್ದಾರೆ.

ಬುಧವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸುಭಾಷಿತವೊಂದನ್ನು ಹಂಚಿಕೊಂಡಿರುವ ಪ್ರಧಾನಿ, ದೇಶದ ಯುವಕರು ತಮ್ಮ ಸಂವೇದನಾಶೀಲತೆ, ಸೇವಾಭಾವ ಹಾಗೂ ಸಾಮರ್ಥ್ಯದ ಮೂಲಕ ಜಗತ್ತಿನಾದ್ಯಂತ ವಿಶಿಷ್ಟ ಗುರುತನ್ನು ಮೂಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ ಹೀಗಿದೆ: “ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್। ಪ್ರಸಾದಯತಿ ಯೋ ಲೋಕಂ ತಂ ಲೋಕೋऽನುಪ್ರಸೀದತಿ।।“

ಅಂದರೆ, ತನ್ನ ದೃಷ್ಟಿಕೋನ, ವಿಚಾರ, ಮಾತು ಮತ್ತು ಕರ್ಮಗಳ ಮೂಲಕ ಜನಮನವನ್ನು ಗೆಲ್ಲುವ ವ್ಯಕ್ತಿ ಪ್ರತಿಯಾಗಿ ಜನರ ವಿಶ್ವಾಸ, ಗೌರವ ಹಾಗೂ ಸದ್ಭಾವನೆಯನ್ನು ಗಳಿಸುತ್ತಾನೆ ಎಂಬ ಸಂದೇಶವನ್ನು ಸುಭಾಷಿತ ಸಾರುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande