ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಆತ್ಮಕಥೆ ಯುವಕರಿಗೆ ಸ್ಫೂರ್ತಿ: ಪ್ರಧಾನಿ ಮೋದಿ
ನವದೆಹಲಿ, 12 ಆಗಸ್ಟ್ (ಹಿ.ಸ.): ಆ್ಯಂಕರ್:ಯುವಕರು ಆತ್ಮಕಥೆಗಳನ್ನು ಓದಿ, ಇತರರ ಜೀವನದ ಹೋರಾಟಗಳಿಂದ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಸಾಮಾಜಿಕ ಜಾಲತಾಣ ಹಾಗೂ ರೀಲ್ಸ್‌ಗಳ ಯುಗದಲ್ಲಿ ಶಾರ್ಟ್‌ಕಟ್‌ ಪ್ರವೃತ್ತಿ ಹೆಚ್ಚುತ್ತಿದ್ದು, ಯುವಕರು ಶಾರ್ಟ್‌ಕಟ್‌ನಿಂದ ದೂರವಿರಬೇಕು ಎಂದ
पूर्व राष्ट्रपति रामनाथ कोविंद की आत्मकथा ‘ट्रायम्फ ऑफ द इंडियन रिपब्लिक: माय लाइफ, माय स्ट्रगल्स’ के विमोचन कार्यक्रम में प्रधानमंत्री नरेंद्र मोदी ।


ನವದೆಹಲಿ, 12 ಆಗಸ್ಟ್ (ಹಿ.ಸ.):

ಆ್ಯಂಕರ್:ಯುವಕರು ಆತ್ಮಕಥೆಗಳನ್ನು ಓದಿ, ಇತರರ ಜೀವನದ ಹೋರಾಟಗಳಿಂದ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಸಾಮಾಜಿಕ ಜಾಲತಾಣ ಹಾಗೂ ರೀಲ್ಸ್‌ಗಳ ಯುಗದಲ್ಲಿ ಶಾರ್ಟ್‌ಕಟ್‌ ಪ್ರವೃತ್ತಿ ಹೆಚ್ಚುತ್ತಿದ್ದು, ಯುವಕರು ಶಾರ್ಟ್‌ಕಟ್‌ನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ‘ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್’ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ಕೋವಿಂದ್ ಅವರ ಜೀವನಯಾನ, ಹೋರಾಟ ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳು ಯುವಜನತೆಗೆ ಸ್ಫೂರ್ತಿಯ ಮೂಲವಾಗಿವೆ ಎಂದರು. ಈ ಆತ್ಮಕಥೆ ಭಾರತೀಯ ಪ್ರಜಾಪ್ರಭುತ್ವ ಹಾಗೂ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಲಿದೆ ಎಂದು ಹೇಳಿದರು.

ಕಾನ್ಪುರ ದೇಹಾತ್‌ನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕೋವಿಂದ್ ಅವರು ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡರೂ ಕಷ್ಟಗಳಿಗೆ ಕುಗ್ಗದೆ, ಶಿಕ್ಷಣವನ್ನು ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ಪರಿಶ್ರಮದ ಮೂಲಕ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ತಲುಪಿದರು ಎಂದು ಪ್ರಧಾನಿ ವಿವರಿಸಿದರು. ರಾಷ್ಟ್ರಪತಿಯಾದ ಬಳಿಕವೂ ಅವರ ಸರಳತೆ ಮತ್ತು ವಿನಯ ಮುಂದುವರಿದಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಂದ್ ಅವರು ತಮ್ಮ ಗ್ರಾಮ ಪರೌಂಖ್‌ಗೆ ಭೇಟಿ ನೀಡಿದಾಗ ಗುರುಗಳ ಪಾದಸ್ಪರ್ಶ ಮಾಡಿ, ಗ್ರಾಮದ ಮಣ್ಣಿಗೆ ನಮಸ್ಕರಿಸಿದ್ದನ್ನು ಉಲ್ಲೇಖಿಸಿದ ಮೋದಿ, ಅವರ ನಡೆ ಭಾರತೀಯ ಸಂಸ್ಕಾರಗಳ ಪ್ರತೀಕವಾಗಿದೆ ಎಂದರು.

ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಮಾನ ಅವಕಾಶದ ಭಾರತದ ಕನಸನ್ನು ಉಲ್ಲೇಖಿಸಿದ ಪ್ರಧಾನಿ, ಬಡವರು ಮತ್ತು ಹಿಂದುಳಿದವರೂ ತಮ್ಮ ಪರಿಶ್ರಮ ಹಾಗೂ ಸಾಮರ್ಥ್ಯದ ಮೂಲಕ ದೇಶದ ಅತ್ಯುನ್ನತ ಸ್ಥಾನ ತಲುಪಬಹುದು ಎಂಬುದಕ್ಕೆ ಕೋವಿಂದ್ ಅವರ ಜೀವನವೇ ಉದಾಹರಣೆ ಎಂದರು.

ಕಷ್ಟಗಳಿಗೆ ಹೆದರದೆ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಯುವಕರ ಅಗತ್ಯ ದೇಶಕ್ಕಿದೆ ಎಂದು ಮೋದಿ ಹೇಳಿದರು. ಆತ್ಮಕಥೆಗಳು ವ್ಯಕ್ತಿಯ ಜೀವನದ ಜೊತೆಗೆ ಅವರು ಬದುಕಿದ ಕಾಲಘಟ್ಟದ ಇತಿಹಾಸವನ್ನೂ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದರು.

ಸಾಮಾಜಿಕ ಜಾಲತಾಣ ಮತ್ತು ರೀಲ್ಸ್‌ಗಳ ಯುಗದಲ್ಲಿ ಶಾರ್ಟ್‌ಕಟ್‌ ಮನೋಭಾವ ಹೆಚ್ಚುತ್ತಿದೆ ಎಂದು ಹೇಳಿದ ಮೋದಿ, ಯುವಕರು ತಮಗೆ ಇಷ್ಟವಾದ ಆತ್ಮಕಥೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೋವಿಂದ್ ಅವರ ಆತ್ಮಕಥೆ ಮುಂದಿನ ಪೀಳಿಗೆಗೆ ಪರಿಶ್ರಮ, ಕರ್ತವ್ಯನಿಷ್ಠೆ, ಸೇವಾಭಾವ ಮತ್ತು ಆತ್ಮವಿಶ್ವಾಸದ ಪಾಠ ಕಲಿಸಲಿದೆ ಎಂದು ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande