ಆನೆ ಸಂರಕ್ಷಣೆಗೆ ದೇಶದಲ್ಲಿ 33 ಆನೆ ಅಭಯಾರಣ್ಯ, 150 ಆನೆ ಕಾರಿಡಾರ್:ಸಚಿವ ಭೂಪೇಂದ್ರ ಯಾದವ್
ನವದೆಹಲಿ, 12 ಆಗಸ್ಟ್ (ಹಿ.ಸ.): ಆ್ಯಂಕರ್:ದೇಶದಲ್ಲಿ ಆನೆಗಳ ಸಂರಕ್ಷಣೆಗಾಗಿ 14 ರಾಜ್ಯಗಳಲ್ಲಿ 33 ಆನೆ ಅಭಯಾರಣ್ಯಗಳು ಹಾಗೂ ವೈಜ್ಞಾನಿಕವಾಗಿ ಗುರುತಿಸಲಾದ 150 ಆನೆ ಕಾರಿಡಾರ್‌ಗಳಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ವಿಶ್ವ ಆನೆ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ
हाथी (फाइल फोटो)।


ನವದೆಹಲಿ, 12 ಆಗಸ್ಟ್ (ಹಿ.ಸ.):

ಆ್ಯಂಕರ್:ದೇಶದಲ್ಲಿ ಆನೆಗಳ ಸಂರಕ್ಷಣೆಗಾಗಿ 14 ರಾಜ್ಯಗಳಲ್ಲಿ 33 ಆನೆ ಅಭಯಾರಣ್ಯಗಳು ಹಾಗೂ ವೈಜ್ಞಾನಿಕವಾಗಿ ಗುರುತಿಸಲಾದ 150 ಆನೆ ಕಾರಿಡಾರ್‌ಗಳಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.

ವಿಶ್ವ ಆನೆ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಆನೆಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಭಾರತದ ಅರಣ್ಯಗಳು, ಜೀವವೈವಿಧ್ಯ ಮತ್ತು ಪರಿಸರ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಿದ್ದಾರೆ.

ಆನೆಗಳ ಸಂಖ್ಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಜತೆಗೆ, ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡಲು ಪರಿಣಾಮಕಾರಿ ಹಾಗೂ ಬಲಿಷ್ಠ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆನೆಗಳು ಮುಂದಿನ ಪೀಳಿಗೆಗಳಿಗೂ ಭಾರತದ ಅರಣ್ಯ ಮತ್ತು ನೈಸರ್ಗಿಕ ಪ್ರದೇಶಗಳಲ್ಲಿ ಮುಕ್ತವಾಗಿ ಸಂಚರಿಸುವಂತಾಗಲು ಇಂತಹ ಸಂರಕ್ಷಣಾ ಕ್ರಮಗಳು ಅಗತ್ಯವೆಂದು ಯಾದವ್ ಹೇಳಿದ್ದಾರೆ.

ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ತಮ್ಮ ಸಂದೇಶದಲ್ಲಿ, ಭಾರತ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ವೈವಿಧ್ಯಮಯ ನೈಸರ್ಗಿಕ ಪರಿಸರ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ವಿಶ್ವದ ಕಾಡು ಏಷ್ಯನ್ ಆನೆಗಳ ಪೈಕಿ ಸುಮಾರು ಶೇ.60ರಷ್ಟು ಭಾರತದಲ್ಲೇ ಕಂಡುಬರುತ್ತವೆ. ಹೀಗಾಗಿ ಆನೆಗಳು ದೇಶದ ಪರಿಸರ ಪರಂಪರೆಯ ಅವಿಭಾಜ್ಯ ಅಂಗವಾಗಿವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಸ್ಥಾಪಿಸಲಾಗಿರುವ ಆನೆ ಅಭಯಾರಣ್ಯಗಳು ಆನೆಗಳ ಸಂರಕ್ಷಣೆಯ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ. ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವಲ್ಲಿ ಆನೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ.

ಆನೆಗಳು ಕಾಡಿನಲ್ಲಿ ಸಂಚರಿಸುವಾಗ ವಿವಿಧ ಪ್ರದೇಶಗಳಿಗೆ ಬೀಜಗಳನ್ನು ಹರಡುತ್ತವೆ. ಇದರಿಂದ ಹೊಸ ಸಸ್ಯಗಳು ಬೆಳೆಯಲು ಹಾಗೂ ಅರಣ್ಯಗಳ ಪುನರುತ್ಪಾದನೆಗೆ ನೆರವಾಗುತ್ತದೆ. ಈ ಮೂಲಕ ಆನೆಗಳ ಸಹಜ ಚಟುವಟಿಕೆಗಳು ಕಾಡುಗಳು ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಮಹತ್ವದ ಕೊಡುಗೆ ನೀಡುತ್ತವೆ ಎಂದು ಕೀರ್ತಿವರ್ಧನ್ ಸಿಂಗ್ ವಿವರಿಸಿದ್ದಾರೆ.

ವಿಶ್ವ ಆನೆ ದಿನದ ಹಿನ್ನೆಲೆಯಲ್ಲಿ ಆನೆಗಳ ಸಂರಕ್ಷಣೆ, ಅವುಗಳ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆ ಹಾಗೂ ಮಾನವ–ಆನೆ ಸಂಘರ್ಷ ಕಡಿಮೆ ಮಾಡುವ ಪ್ರಯತ್ನಗಳಲ್ಲಿ ಸಾರ್ವಜನಿಕರು ಒಗ್ಗೂಡಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande