ಎನ್.ಡಿ.ಎ. ಮಂಗಳ ಮಿಲನ ಸಭೆ; ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ
ನವದೆಹಲಿ, 11 ಆಗಸ್ಟ್ (ಹಿ.ಸ.): ಆ್ಯಂಕರ್:ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಂಸದೀಯ ಪಕ್ಷದ ಸಾಪ್ತಾಹಿಕ ‘ಮಂಗಳ ಮಿಲನ’ ಸಭೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎನ್.ಡಿ.ಎ. ಹಲವು ಸಂಸದರು ಹಾಗೂ ಹಿರಿಯ ನಾಯಕರು ಭಾಗವಹಿಸಿದರು. ಸಭೆಯ ವೇಳೆ
राजग की बैठक में तिरंगा लहराते हुए प्रधानमंत्री मोदी


ನವದೆಹಲಿ, 11 ಆಗಸ್ಟ್ (ಹಿ.ಸ.):

ಆ್ಯಂಕರ್:ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಂಸದೀಯ ಪಕ್ಷದ ಸಾಪ್ತಾಹಿಕ ‘ಮಂಗಳ ಮಿಲನ’ ಸಭೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ

ಎನ್.ಡಿ.ಎ. ಹಲವು ಸಂಸದರು ಹಾಗೂ ಹಿರಿಯ ನಾಯಕರು ಭಾಗವಹಿಸಿದರು.

ಸಭೆಯ ವೇಳೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎನ್.ಡಿ.ಎ. ನಾಯಕರು ತ್ರಿವರ್ಣ ಧ್ವಜ ಹಾರಿಸಿದರು. ಸಭೆಯ ಆರಂಭದಲ್ಲಿ ‘ವಂದೇ ಮಾತರಂ’ ಘೋಷಣೆ ಮೊಳಗಿತು.

ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಉಪಸ್ಥಿತರಿದ್ದು ವಿವಿಧ ವಿಚಾರಗಳ ಕುರಿತು ಚರ್ಚಿಸಬೇಕು ಎಂದು ಪ್ರತಿಪಕ್ಷ ನಿರಂತರವಾಗಿ ಆಗ್ರಹಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಎನ್.ಡಿ.ಎ. ನಾಯಕರು ಪ್ರತಿಪಕ್ಷದ ವಿರುದ್ಧ ರಾಜಕೀಯವಾಗಿ ತಿರುಗೇಟು ನೀಡಲು ಸಭೆಯಲ್ಲಿ ಕಾರ್ಯತಂತ್ರ ರೂಪಿಸಿದರು.

ಸಭೆಯಿಂದ ಹೊರಬರುವಾಗ ಎನ್.ಡಿ.ಎ. ನಾಯಕರು ಕೈಯಲ್ಲಿ ಹಿಡಿದಿದ್ದ ಫಲಕಗಳ ಮೂಲಕ ಪ್ರತಿಪಕ್ಷದ ವಿರುದ್ಧ ಸಂದೇಶ ನೀಡಿದರು. “ಗೃಹ ಸಚಿವರು ಚರ್ಚೆಗೆ ಸಿದ್ಧರಿದ್ದಾರೆ, ಪ್ರತಿಪಕ್ಷ ಓಡಿಹೋಗುತ್ತಿದೆ” ಎಂದು ಫಲಕಗಳಲ್ಲಿ ಬರೆಯಲಾಗಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande