
ನವದೆಹಲಿ, 11 ಆಗಸ್ಟ್ (ಹಿ.ಸ.):
ಆ್ಯಂಕರ್:ವ್ಯಕ್ತಿಯ ಜೀವನವನ್ನು ಬೆಳಗಿಸಿ, ಉತ್ತಮ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ನಿರ್ಮಾಣಕ್ಕೆ ನೆರವಾಗುವ ಎಂಟು ಪ್ರಮುಖ ಗುಣಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಂಚಿಕೊಂಡ ‘ಸುಭಾಷಿತ’ದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂಸ್ಕೃತದ ಸುಭಾಷಿತವನ್ನು ಹಂಚಿಕೊಂಡು ಅದರ ಅರ್ಥವನ್ನು ವಿವರಿಸಿದ್ದಾರೆ. ಜ್ಞಾನ, ಉತ್ತಮ ನಡವಳಿಕೆ, ಆತ್ಮಸಂಯಮ, ವಿದ್ಯೆ, ಧೈರ್ಯ, ಉತ್ತಮ ವಾಗ್ಮಿತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಹಾಗೂ ಕೃತಜ್ಞತೆ ವ್ಯಕ್ತಿಯ ಜೀವನವನ್ನು ಬೆಳಗಿಸುವ ಗುಣಗಳಾಗಿವೆ ಎಂದು ತಿಳಿಸಿದ್ದಾರೆ.
ಜ್ಞಾನ ವ್ಯಕ್ತಿಗೆ ಸರಿಯಾದ ಮಾರ್ಗ ತೋರಿಸುತ್ತದೆ. ಉತ್ತಮ ನಡವಳಿಕೆ ಚಾರಿತ್ರ್ಯವನ್ನು ಶುದ್ಧವಾಗಿರಿಸಿದರೆ, ಆತ್ಮಸಂಯಮ ಶಿಸ್ತನ್ನು ಬೆಳೆಸುತ್ತದೆ. ವಿದ್ಯೆ ತಿಳುವಳಿಕೆ ನೀಡುತ್ತದೆ, ಧೈರ್ಯ ಕಠಿಣ ಸಂದರ್ಭಗಳಲ್ಲಿ ದೃಢವಾಗಿ ನಿಲ್ಲಲು ನೆರವಾಗುತ್ತದೆ. ಉತ್ತಮ ಮಾತುಗಾರಿಕೆ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಹಾಗೂ ದಯೆ ತೋರಿದವರಿಗೆ ಕೃತಜ್ಞತೆ ಸಲ್ಲಿಸುವುದು ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.