ಖುದಿರಾಮ್ ಬೋಸ್ ಬಲಿದಾನ ದಿನ: ಓಂ ಬಿರ್ಲಾ, ಅಮಿತ್ ಶಾ ಸೇರಿ ಗಣ್ಯರಿಂದ ಗೌರವ ನಮನ
ನವದೆಹಲಿ, 11 ಆಗಸ್ಟ್ (ಹಿ.ಸ.): ಆ್ಯಂಕರ್:ಅಮರ ಕ್ರಾಂತಿಕಾರಿ ಹುತಾತ್ಮ ಖುದಿರಾಮ್ ಬೋಸ್ ಅವರ ಬಲಿದಾನ ದಿನದ ಅಂಗವಾಗಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿದಂತೆ ಹಲವು ನಾಯಕರು ಮಂಗಳವಾರ ಗೌರವ ನಮನ ಸಲ್ಲಿಸಿದರ
प्रतीकात्मक


ನವದೆಹಲಿ, 11 ಆಗಸ್ಟ್ (ಹಿ.ಸ.):

ಆ್ಯಂಕರ್:ಅಮರ ಕ್ರಾಂತಿಕಾರಿ ಹುತಾತ್ಮ ಖುದಿರಾಮ್ ಬೋಸ್ ಅವರ ಬಲಿದಾನ ದಿನದ ಅಂಗವಾಗಿ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿದಂತೆ ಹಲವು ನಾಯಕರು ಮಂಗಳವಾರ ಗೌರವ ನಮನ ಸಲ್ಲಿಸಿದರು.

ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಖುದಿರಾಮ್ ಬೋಸ್ ಅವರನ್ನು ಸ್ಮರಿಸಿ, ಮಾತೃಭೂಮಿಗಾಗಿ ನಗುನಗುತ್ತಲೇ ಜೀವನವನ್ನು ತ್ಯಾಗ ಮಾಡಿದ ಈ ವೀರ ಪುತ್ರನ ಬಲಿದಾನ ಸದಾ ರಾಷ್ಟ್ರೀಯ ಪ್ರಜ್ಞೆಗೆ ಪ್ರೇರಣೆಯಾಗಿರಲಿದೆ ಎಂದು ಹೇಳಿದರು.

ಅಮಿತ್ ಶಾ ಅವರು, ಭಾರತವನ್ನು ಬ್ರಿಟಿಷರ ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಗೊಳಿಸಲು ಖುದಿರಾಮ್ ಬೋಸ್ ಅಲ್ಪ ವಯಸ್ಸಿನಲ್ಲೇ ಸಶಸ್ತ್ರ ಕ್ರಾಂತಿಯ ಹಾದಿ ಹಿಡಿದರು. ತಮ್ಮ ಧೈರ್ಯ, ಶೌರ್ಯ ಮತ್ತು ತ್ಯಾಗದಿಂದ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿದ್ದರು ಎಂದು ಸ್ಮರಿಸಿದರು.

ಕೇವಲ 18ನೇ ವಯಸ್ಸಿನಲ್ಲಿ ನಗುನಗುತ್ತಲೇ ಗಲ್ಲಿಗೇರಿದ ಖುದಿರಾಮ್ ಬೋಸ್ ಅವರ ದೇಶಭಕ್ತಿ ಮತ್ತು ತ್ಯಾಗದ ಗಾಥೆ ಇಂದಿಗೂ ಯುವಜನತೆಗೆ ಶೌರ್ಯ, ಸ್ವಾಭಿಮಾನ ಹಾಗೂ ರಾಷ್ಟ್ರಸೇವೆಯ ಪ್ರೇರಣೆ ನೀಡುತ್ತಿದೆ ಎಂದು ಶಾ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಖುದಿರಾಮ್ ಬೋಸ್ ಅವರ ನಿರ್ಭೀತ ವ್ಯಕ್ತಿತ್ವ ಮತ್ತು ಅಚಲ ಸಂಕಲ್ಪ ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಖುದಿರಾಮ್ ಬೋಸ್ ಅವರ ಅದಮ್ಯ ಧೈರ್ಯ, ಅಚಲ ದೇಶಭಕ್ತಿ ಮತ್ತು ರಾಷ್ಟ್ರದ ಮೇಲಿನ ಸಮರ್ಪಣೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಕೂಡ ಖುದಿರಾಮ್ ಬೋಸ್ ಅವರ ತ್ಯಾಗ, ಧೈರ್ಯ ಮತ್ತು ರಾಷ್ಟ್ರಪ್ರೇಮವನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande