ಯುಜಿಸಿ-ನೆಟ್ ಜೂನ್ 2026ರ ತಾತ್ಕಾಲಿಕ ಕೀ ಉತ್ತರ ಈ ವಾರ ಬಿಡುಗಡೆ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್:ಯುಜಿಸಿ-ನೆಟ್ ಜೂನ್ 2026ರ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಈ ವಾರ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ತಿಳಿಸಿದೆ. ಇದರೊಂದಿಗೆ ಸಿಎಸ್‌ಐಆರ್-ನೆಟ್ ಹಾಗೂ ಐಸಿಎಆರ್-ಎಐಇಇಎ (ಪಿಜಿ) ಮತ್ತು ಎಐಸ
ಯುಜಿಸಿ-ನೆಟ್ ಜೂನ್ 2026ರ ತಾತ್ಕಾಲಿಕ ಕೀ ಉತ್ತರ ಈ ವಾರ ಬಿಡುಗಡೆ


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:ಯುಜಿಸಿ-ನೆಟ್ ಜೂನ್ 2026ರ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಈ ವಾರ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ತಿಳಿಸಿದೆ.

ಇದರೊಂದಿಗೆ ಸಿಎಸ್‌ಐಆರ್-ನೆಟ್ ಹಾಗೂ ಐಸಿಎಆರ್-ಎಐಇಇಎ (ಪಿಜಿ) ಮತ್ತು ಎಐಸಿಇ (ಪಿಎಚ್‌ಡಿ) 2026ರ ಪರೀಕ್ಷೆಗಳ ತಾತ್ಕಾಲಿಕ ಉತ್ತರ ಕೀಯನ್ನೂ ಪ್ರಕಟಿಸಲಾಗುವುದು.

ಉತ್ತರ ಕೀ ಬಿಡುಗಡೆಯಾದ ಬಳಿಕ ಅಭ್ಯರ್ಥಿಗಳು ಅದನ್ನು ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಪ್ರಶ್ನೆಗಳು ಅಥವಾ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಉತ್ತರ ಕೀ ವೀಕ್ಷಣೆ ಮತ್ತು ಆಕ್ಷೇಪಣೆ ಸಲ್ಲಿಸುವ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಣೆಯ ಸಮಯದಲ್ಲಿ ನೀಡಲಾಗುತ್ತದೆ.

ಅಭ್ಯರ್ಥಿಗಳು ಉತ್ತರ ಕೀ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಇತರ ಮಾಹಿತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಧಿಕೃತ ಜಾಲತಾಣವನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಧಿಕೃತ ಸಂಸ್ಥೆಯಿಂದ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande