ಸ್ಲೋವೇನಿಯಾದಲ್ಲಿರುವ ರಾಯಭಾರ ಕಚೇರಿ ಮೇಲಿನ ದಾಳಿ ಖಂಡಿಸಿದ ಭಾರತ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್:ಯುರೋಪಿನ ಸ್ಲೋವೇನಿಯಾ ದೇಶದ ರಾಜಧಾನಿ ಲುಬ್ಲಿಯಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆವರಣವನ್ನು ಖಲಿಸ್ತಾನ ಪರ ಬೆಂಬಲಿಗರು ಗುರಿಯಾಗಿಸಿಕೊಂಡಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇಂತಹ ಗುಂಪುಗಳು ಹರಡುತ್ತಿರುವ ದ್ವೇಷಪೂರಿತ ಪ್ರಚಾರ ಮತ್ತು ಸುಳ್
MEA Bangladesh HC Summon


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:ಯುರೋಪಿನ ಸ್ಲೋವೇನಿಯಾ ದೇಶದ ರಾಜಧಾನಿ ಲುಬ್ಲಿಯಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆವರಣವನ್ನು ಖಲಿಸ್ತಾನ ಪರ ಬೆಂಬಲಿಗರು ಗುರಿಯಾಗಿಸಿಕೊಂಡಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಇಂತಹ ಗುಂಪುಗಳು ಹರಡುತ್ತಿರುವ ದ್ವೇಷಪೂರಿತ ಪ್ರಚಾರ ಮತ್ತು ಸುಳ್ಳು ಮಾಹಿತಿಯ ಬಗ್ಗೆ ಇತರ ದೇಶಗಳ ಕಾನೂನು ಜಾರಿ ಸಂಸ್ಥೆಗಳೂ ಗಮನಹರಿಸಬೇಕು ಎಂದು ಭಾರತ ಮನವಿ ಮಾಡಿದೆ.

ಘಟನೆ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ವಿಯೆನ್ನಾ ಒಪ್ಪಂದದ ಅಡಿಯಲ್ಲಿ ರಾಜತಾಂತ್ರಿಕ ಆವರಣಗಳಿಗೆ ರಕ್ಷಣೆ ಮತ್ತು ಭದ್ರತೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.

ಈ ಖಂಡನೀಯ ಕೃತ್ಯಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವಂತೆ ನವದೆಹಲಿ ಮತ್ತು ಲುಬ್ಲಿಯಾನಾ ಎರಡೂ ಕಡೆ ಸ್ಲೋವೇನಿಯಾ ಅಧಿಕಾರಿಗಳೊಂದಿಗೆ ವಿಷಯವನ್ನು ಬಲವಾಗಿ ಪ್ರಸ್ತಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande