ಲೋಕಸಭೆ ಕಲಾಪ ಸ್ಥಗಿತಕ್ಕೆ ತೆರೆ ಎಳೆಯುವಂತೆ ಓಂ ಬಿರ್ಲಾ ಮನವಿ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್:ಲೋಕಸಭೆಯಲ್ಲಿ ಮುಂದುವರಿದಿರುವ ಗದ್ದಲ ಮತ್ತು ಕಲಾಪ ಸ್ಥಗಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎಲ್ಲ ಪಕ್ಷಗಳ ಮುಖಂಡರು ಒಗ್ಗೂಡಿ ಸಮಸ್ಯೆ ಬಗೆಹರಿಸಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಸೋಮವಾರ ನಡೆದ
कार्य मंत्रणा समिति की बैठक का दृष्य


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:ಲೋಕಸಭೆಯಲ್ಲಿ ಮುಂದುವರಿದಿರುವ ಗದ್ದಲ ಮತ್ತು ಕಲಾಪ ಸ್ಥಗಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎಲ್ಲ ಪಕ್ಷಗಳ ಮುಖಂಡರು ಒಗ್ಗೂಡಿ ಸಮಸ್ಯೆ ಬಗೆಹರಿಸಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಸೋಮವಾರ ನಡೆದ ಕಾರ್ಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಧ್ವನಿ ಸದನದಲ್ಲಿ ಕೇಳಿಸಬೇಕು. ಜನರ ಸಮಸ್ಯೆಗಳನ್ನು ಸದನದ ಹೊರಗೆ ಕಾಯುವಂತೆ ಮಾಡಲಾಗದು. ಅವುಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮಹತ್ವದ ವಿಧೇಯಕಗಳ ಕುರಿತು ಚರ್ಚೆಗೆ ಅಗತ್ಯವಿರುವಷ್ಟು ಸಮಯ ನೀಡಲಾಗುವುದು ಎಂದು ತಿಳಿಸಿದ ಬಿರ್ಲಾ, ಸದಸ್ಯರ ಪರಿಣಾಮಕಾರಿ ಭಾಗವಹಿಸುವಿಕೆಯೊಂದಿಗೆ ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆ ನಡೆಯಬೇಕು ಎಂದರು. ಎಲ್ಲ ಪಕ್ಷಗಳ ಸಹಕಾರದಿಂದ ಸದನದ ಕಲಾಪವನ್ನು ಸುಗಮ, ವ್ಯವಸ್ಥಿತ ಮತ್ತು ಗೌರವಯುತವಾಗಿ ನಡೆಸುವಂತೆ ಮನವಿ ಮಾಡಿದರು.

ಮಳೆಗಾಲದ ಅಧಿವೇಶನ ಆರಂಭವಾಗಿ ಎರಡು ವಾರಗಳಿಗೂ ಹೆಚ್ಚು ಸಮಯ ಕಳೆದಿದ್ದರೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಮುಂದುವರಿದಿದೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ-2026 ಹಾಗೂ ಗಣಿ ಮತ್ತು ಖನಿಜಗಳ ತಿದ್ದುಪಡಿ ವಿಧೇಯಕ-2026 ಅನ್ನು ಸಂಸದೀಯ ಪರಿಶೀಲನೆಗೆ ಕಳುಹಿಸಬೇಕೆಂದು ಪ್ರತಿಪಕ್ಷ ಒತ್ತಾಯಿಸುತ್ತಿದೆ.

ಇದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ರಾಮಮಂದಿರ ದೇಣಿಗೆ ಅವ್ಯವಹಾರದ ಆರೋಪದ ಕುರಿತು ಚರ್ಚೆ ನಡೆಸಬೇಕೆಂದು ಪ್ರತಿಪಕ್ಷ ಆಗ್ರಹಿಸಿದೆ. ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೆ ಸದನದ ಕಲಾಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಚರ್ಚೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಗೃಹ ಸಚಿವರು ಉತ್ತರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ಎರಡೂ ವಿಷಯಗಳ ಕುರಿತು ಚರ್ಚೆ ನಡೆಸಬೇಕೆಂಬ ಬೇಡಿಕೆಯಲ್ಲಿ ಪ್ರತಿಪಕ್ಷ ಪಟ್ಟು ಹಿಡಿದಿದೆ. ಕಾರ್ಯ ಸಲಹಾ ಸಮಿತಿ ಸಭೆಯಲ್ಲಿ ಎಫ್‌ಸಿಆರ್‌ಎ ವಿಧೇಯಕ ಅಥವಾ ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕದ ಕುರಿತು ಯಾವುದೇ ಚರ್ಚೆ ನಡೆದಿಲ್ಲ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande