
ನವದೆಹಲಿ, 10 ಆಗಸ್ಟ್ (ಹಿ.ಸ.):
ಆ್ಯಂಕರ್:
ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ವಿಧೇಯಕ-2026 ಅನ್ನು ರಾಜ್ಯಸಭೆ ಸೋಮವಾರ ಧ್ವನಿಮತದ ಮೂಲಕ ಅಂಗೀಕರಿಸಿದೆ. ವಿಧೇಯಕದ ಮೇಲಿನ ಚರ್ಚೆಯ ವೇಳೆ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಈ ವಿಧೇಯಕವನ್ನು ಲೋಕಸಭೆ ಈಗಾಗಲೇ ಅಂಗೀಕರಿಸಿತ್ತು.
ಚರ್ಚೆಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಹತ್ವದ ಸುಧಾರಣಾ ವಿಧೇಯಕದ ಚರ್ಚೆಯಿಂದ ಪ್ರತಿಪಕ್ಷ ಹೊರನಡೆದಿರುವುದು ವಿಷಾದಕರ ಎಂದು ಹೇಳಿದರು. ಇಂತಹ ಸುಧಾರಣಾ ವಿಧೇಯಕಗಳ ಚರ್ಚೆಯಲ್ಲಿ ಪ್ರತಿಪಕ್ಷದ ಸಂಸದರು ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
1891ರಲ್ಲಿ ಜಾರಿಗೆ ಬಂದಿರುವ ಪ್ರಸ್ತುತ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಕಾನೂನು ವಸಾಹತುಶಾಹಿ ಕಾಲದ್ದಾಗಿದೆ. ಆಗ ಬ್ಯಾಂಕಿಂಗ್ ವ್ಯವಸ್ಥೆ ಬಹುತೇಕ ಕಾಗದದ ದಾಖಲೆಗಳನ್ನು ಆಧರಿಸಿತ್ತು. ಆದರೆ ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದ್ಯುನ್ಮಾನ ದಾಖಲೆಗಳ ಬಳಕೆ ವ್ಯಾಪಕವಾಗಿದೆ. ಹೀಗಾಗಿ ಹಳೆಯ ಕಾನೂನನ್ನು ಡಿಜಿಟಲ್ ವ್ಯವಸ್ಥೆಗೆ ಅನುಗುಣವಾಗಿ ಬದಲಾಯಿಸುವ ಅಗತ್ಯವಿದೆ ಎಂದು ಸೀತಾರಾಮನ್ ತಿಳಿಸಿದರು.
ಆಗಸ್ಟ್ 5ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಹೊಸ ವಿಧೇಯಕವು 135 ವರ್ಷಗಳಷ್ಟು ಹಳೆಯ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಕಾಯ್ದೆ-1891ಕ್ಕೆ ಬದಲಿಯಾಗಲಿದೆ. ಇದರ ಮೂಲಕ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಡಿಜಿಟಲ್, ವರ್ಚುವಲ್ ಮತ್ತು ಕ್ಲೌಡ್ ಆಧಾರಿತ ದಾಖಲೆಗಳನ್ನು ನ್ಯಾಯಾಲಯಗಳಲ್ಲಿ ಮಾನ್ಯ ಸಾಕ್ಷ್ಯಗಳಾಗಿ ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.