
ಜಮ್ಮು, 09 ಜುಲೈ (ಹಿ.ಸ.):
ಆ್ಯಂಕರ್:
ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಅಮರನಾಥ ಯಾತ್ರೆಯ 8ನೇ ತಂಡದ 8,150ಕ್ಕೂ ಹೆಚ್ಚು ಭಕ್ತರು ಗುರುವಾರ ಜಮ್ಮುವಿನ ಭಗವತಿ ನಗರ ಯಾತ್ರಿಕರ ನಿವಾಸ ಮೂಲ ಶಿಬಿರದಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇವಾಲಯದತ್ತ ಪ್ರಯಾಣ ಬೆಳೆಸಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ, ಒಟ್ಟು 334 ವಾಹನಗಳ (ಲಘು ಹಾಗೂ ಭಾರೀ ವಾಹನಗಳು) ಬೆಂಗಾವಲಿನಲ್ಲಿ ಯಾತ್ರಿಕರನ್ನು ಎರಡು ಮಾರ್ಗಗಳ ಮೂಲಕ ಕಳುಹಿಸಲಾಯಿತು. ಇವರಲ್ಲಿ 3,445 ಮಂದಿ ಬಾಲ್ತಾಲ್ ಮಾರ್ಗದ ಮೂಲಕ ಹಾಗೂ 4,705 ಮಂದಿ ಪಹಲ್ಗಾಮ್ ಮಾರ್ಗದ ಮೂಲಕ ಅಮರನಾಥ ಕ್ಷೇತ್ರಕ್ಕೆ ತೆರಳಿದ್ದಾರೆ.
ಯಾತ್ರೆ ಸುಗಮ ಮತ್ತು ಸುರಕ್ಷಿತವಾಗಿ ನಡೆಯುವಂತೆ ನಾಗರಿಕ ಆಡಳಿತ, ಜಮ್ಮು-ಕಾಶ್ಮೀರ ಪೊಲೀಸ್, ಭದ್ರತಾ ಪಡೆಗಳು ಹಾಗೂ ಶ್ರೀ ಅಮರನಾಥ ಶ್ರೈನ್ ಮಂಡಳಿ ಸಮನ್ವಯದಿಂದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿವೆ. ಯಾತ್ರಿಕರಿಗೆ ಬಹುಹಂತದ ಭದ್ರತೆ ಒದಗಿಸಲಾಗಿದೆ.
ಜಮ್ಮು-ಕಾಶ್ಮೀರ ಆಡಳಿತವು ಯಾತ್ರಿಕರು ಕಡ್ಡಾಯವಾಗಿ ಮಾನ್ಯ ನೋಂದಣಿ ಹಾಗೂ ನಿಗದಿತ ದಿನಾಂಕದ ಪ್ರಕಾರವೇ ಯಾತ್ರೆ ಕೈಗೊಳ್ಳುವಂತೆ ಮನವಿ ಮಾಡಿದೆ. ನೋಂದಣಿ ಇಲ್ಲದ ಯಾವುದೇ ಯಾತ್ರಿಕರಿಗೆ ಮೂಲ ಶಿಬಿರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.