ಏಷ್ಯಾದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಮೂಲಕ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತಷ್ಟು ಬಲಿಷ್ಠ: ಬಿಜೆಪಿ
ನವದೆಹಲಿ, 08 ಜುಲೈ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಕೇವಲ ಭಾಷಣಗಳು ಅಥವಾ ಸಾಂಕೇತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಹಂಚಿಕೊಂಡಿರುವ ನಾಗರಿಕತೆಯ ಪರಂಪರೆಯ ಸಂರಕ್ಷಣೆ ಮತ್ತು ಪುನರುತ್ಥಾನದ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ತ
ಅಮಿತ್ ಮಾಳವೀಯ ಹಂಚಿಕೊಂಡಿರುವ ಪೋಟೋ


ನವದೆಹಲಿ, 08 ಜುಲೈ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಕೇವಲ ಭಾಷಣಗಳು ಅಥವಾ ಸಾಂಕೇತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಹಂಚಿಕೊಂಡಿರುವ ನಾಗರಿಕತೆಯ ಪರಂಪರೆಯ ಸಂರಕ್ಷಣೆ ಮತ್ತು ಪುನರುತ್ಥಾನದ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಪಾತ್ರವನ್ನು ಬಲಪಡಿಸುತ್ತಿದೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಶ್ರೀಲಂಕಾದ ತಿರುಕೇತೀಶ್ವರಂ ದೇವಾಲಯ, ಬಹರೈನ್ನ ಶ್ರೀನಾಥಜಿ ದೇವಾಲಯ, ಕಾಂಬೋಡಿಯಾದ ಅಂಕೋರ್, ಲಾವೋಸ್ನ ವಾಟ್ ಫೂ, ವಿಯೆಟ್ನಾಂನ ಮೈಸನ್, ನೇಪಾಳದ ಐತಿಹಾಸಿಕ ಪರಂಪರೆ ತಾಣಗಳು, ಬಾಂಗ್ಲಾದೇಶದ ದೇವಾಲಯಗಳು, ಮ್ಯಾನ್ಮಾರ್ನ ಬಗಾನ್ ಪರಂಪರೆ ವಲಯ ಹಾಗೂ ಇದೀಗ ಇಂಡೋನೇಷ್ಯಾದ ಪ್ರಮ್ಬಾನನ್ ದೇವಾಲಯ ಸಂಕೀರ್ಣದ ಸಂರಕ್ಷಣೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಈ ಯೋಜನೆಗಳ ಮೂಲಕ ಆಧುನಿಕ ಗಡಿಗಳನ್ನು ಮೀರಿ ಹರಡಿರುವ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಭಾರತ ಮಹತ್ವದ ಕೊಡುಗೆ ನೀಡುತ್ತಿದೆ. ನಾಗರಿಕತೆಯ ಆತ್ಮವಿಶ್ವಾಸವನ್ನು ಆಧರಿಸಿದ ಭಾರತದ ಸಾಫ್ಟ್ ಪವರ್ ಪ್ರಾದೇಶಿಕ ರಾಷ್ಟ್ರಗಳೊಂದಿಗೆ ಸ್ನೇಹ, ಜನ-ಜನರ ಬಾಂಧವ್ಯ ಹಾಗೂ ಸಾಂಸ್ಕೃತಿಕ ಸಹಕಾರವನ್ನು ಇನ್ನಷ್ಟು ಬಲಪಡಿಸುತ್ತಿದೆ ಎಂದು ಅವರು ಹೇಳಿದರು. ಭಾರತ ಕೇವಲ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುತ್ತಿಲ್ಲ; ಶತಮಾನಗಳ ನಾಗರಿಕತೆಯ ಸಂಬಂಧಗಳಿಗೂ ಹೊಸ ಬಲ ನೀಡುತ್ತಿದೆ ಎಂದರು.

ಭಾರತವು ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಇಂಡೋನೇಷ್ಯಾದ ಪ್ರಮ್ಬಾನನ್ ದೇವಾಲಯ ಸಂಕೀರ್ಣದ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕಾರ ನೀಡಲು ಮುಂದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಉಭಯ ದೇಶಗಳು ಮಂಗಳವಾರ ಆಶಯ ಪತ್ರಕ್ಕೆ ಸಹಿ ಹಾಕಿವೆ.

10ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪ್ರಮ್ಬಾನನ್ ದೇವಾಲಯವು ಹಿಂದೂ ಧರ್ಮದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಸಮರ್ಪಿತವಾಗಿದೆ. ಇದರ ಜೊತೆಗೆ ಈ ದೇವತೆಗಳ ವಾಹನಗಳೆಂದು ಪರಿಗಣಿಸಲಾದ ಪ್ರಾಣಿಗಳಿಗೆ ಸಮರ್ಪಿತವಾದ ಮೂರು ದೇವಾಲಯಗಳೂ ಸಂಕೀರ್ಣದಲ್ಲಿವೆ. ಈ ದೇವಾಲಯವನ್ನು ಪ್ರಾಚೀನ ಮತಾರ ಸಾಮ್ರಾಜ್ಯದ ಸಂಜಯ ವಂಶದ ಹಿಂದೂ ಅರಸ ರಕೈ ಪಿಕಾಟನ್ ನಿರ್ಮಿಸಿದ್ದಾನೆ ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande