
ನವದೆಹಲಿ, 08 ಜುಲೈ (ಹಿ.ಸ.):
ಆ್ಯಂಕರ್:
ತಾಳ್ಮೆಯೇ ಯಾವುದೇ ದೇಶದ ಅತಿದೊಡ್ಡ ಶಕ್ತಿಯಾಗಿದ್ದು, ಅತ್ಯಂತ ಕಠಿಣ ಸವಾಲುಗಳ ನಡುವೆಯೂ ರಾಷ್ಟ್ರವನ್ನು ಒಗ್ಗೂಡಿಸಿ ಪ್ರಗತಿ, ಸಮೃದ್ಧಿ ಹಾಗೂ ಆತ್ಮನಿರ್ಭರತೆಯತ್ತ ಮುನ್ನಡೆಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುಧವಾರ ತಮ್ಮ ಎಕ್ಸ್ ಖಾತೆಯಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಿ, ಧೈರ್ಯ, ದೃಢಸಂಕಲ್ಪ ಮತ್ತು ಮಾನಸಿಕ ಸ್ಥಿರತೆಯ ಮಹತ್ವವನ್ನು ವಿವರಿಸಿದರು.
ಚಲಂತಿ ಗಿರಯಃ ಕಾಮಂ ಯುಗಾಂತಪವನಾಹತಾಃ । ಕೃಚ್ಛ್ರೇऽಪಿ ನ ಚಲತ್ಯೇವ ಧೀರಾಣಾಂ ನಿಶ್ಚಲಂ ಮನಃ ॥ ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ಪ್ರಳಯಕಾಲದ ಭೀಕರ ಗಾಳಿಗೆ ಬೃಹತ್ ಪರ್ವತಗಳೇ ನಡುಗಬಹುದು. ಆದರೆ ಧೀರ, ವಿವೇಕಿ ಹಾಗೂ ದೃಢಸಂಕಲ್ಪ ಹೊಂದಿದ ವ್ಯಕ್ತಿಯ ಮನಸ್ಸು ಎಂತಹ ಸಂಕಷ್ಟದ ಸಂದರ್ಭದಲ್ಲೂ ತನ್ನ ಗುರಿಯಿಂದ ಎಂದಿಗೂ ವಿಚಲಿತವಾಗುವುದಿಲ್ಲ ಎಂದು ತಿಳಿಸಿದರು.
ಈ ಸುಭಾಷಿತವು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಮಾನಸಿಕ ಸಮತೋಲನ, ಸತ್ಯದ ಮಾರ್ಗ ಮತ್ತು ದೃಢಸಂಕಲ್ಪವನ್ನು ಕಾಪಾಡಿಕೊಳ್ಳುವಂತೆ ಸಂದೇಶ ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.