ಪ್ರಂಬಾನನ್ ದೇವಾಲಯ ಪುನರುತ್ಥಾನ ಯೋಜನೆಗೆ ಮೋದಿ–ಇಂಡೋನೇಷ್ಯಾ ಅಧ್ಯಕ್ಷರಿಂದ ಚಾಲನೆ
ಯೋಗ್ಯಕಾರ್ತಾ, 08 ಜುಲೈ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಬೋವೊ ಸುಬಿಯಾಂತೊ ಅವರು ಬುಧವಾರ ಇಂಡೋನೇಷ್ಯಾದ ಯೋಗ್ಯಕಾರ್ತಾದಲ್ಲಿರುವ ವಿಶ್ವಪ್ರಸಿದ್ಧ ಪ್ರಂಬಾನನ್ ದೇವಾಲಯ ಸಂಕೀರ್ಣದ ಸಂರಕ್ಷಣೆ ಮತ್ತು ಪುನರುತ್ಥಾನ ಯೋಜನೆಗೆ ಸಂಯುಕ್ತವಾಗಿ ಚಾಲನೆ ನೀಡಿದರು. ಯುನೆಸ್ಕೋ ವಿಶ್ವ ಪರಂಪ
ಪ್ರಂಬಾನನ್ ದೇವಾಲಯ ಪುನರುತ್ಥಾನ ಯೋಜನೆಗೆ ಚಾಲನೆ


ಯೋಗ್ಯಕಾರ್ತಾ, 08 ಜುಲೈ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಬೋವೊ ಸುಬಿಯಾಂತೊ ಅವರು ಬುಧವಾರ ಇಂಡೋನೇಷ್ಯಾದ ಯೋಗ್ಯಕಾರ್ತಾದಲ್ಲಿರುವ ವಿಶ್ವಪ್ರಸಿದ್ಧ ಪ್ರಂಬಾನನ್ ದೇವಾಲಯ ಸಂಕೀರ್ಣದ ಸಂರಕ್ಷಣೆ ಮತ್ತು ಪುನರುತ್ಥಾನ ಯೋಜನೆಗೆ ಸಂಯುಕ್ತವಾಗಿ ಚಾಲನೆ ನೀಡಿದರು.

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ದೇವಾಲಯ ಸಂಕೀರ್ಣವು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. 10ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಶಿವ ದೇವಾಲಯವು ಭಾರತ–ಇಂಡೋನೇಷ್ಯಾ ನಡುವಿನ ಶತಮಾನಗಳ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಸಂಕೇತವಾಗಿದೆ.

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಗವಾನ್ ಶಿವನಿಗೆ ಸಂಬಂಧಿಸಿದ ಪವಿತ್ರ ಕ್ಷೇತ್ರಗಳ ಸಂರಕ್ಷಣೆ ಮತ್ತು ಸೇವೆ ಸಲ್ಲಿಸುವ ಅವಕಾಶ ಜೀವನದಲ್ಲಿ ಪದೇ ಪದೇ ದೊರೆತಿರುವುದು ತಮ್ಮ ಭಾಗ್ಯ ಎಂದು ಹೇಳಿದರು. ತಾವು ಗುಜರಾತ್‌ನ ವಡನಗರದಲ್ಲಿ ಜನಿಸಿದ್ದು, ಅಲ್ಲಿ ಹಾಟಕೇಶ್ವರ ಮಹಾದೇವರ ಪ್ರಸಿದ್ಧ ಕ್ಷೇತ್ರವಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವೂ ಗುಜರಾತ್‌ನಲ್ಲಿದ್ದು, ಅದರ ಅಭಿವೃದ್ಧಿಯಲ್ಲಿ ನೇರ ಹೊಣೆಗಾರಿಕೆ ನಿರ್ವಹಿಸುವ ಅವಕಾಶ ತಮಗೆ ದೊರೆತಿತ್ತು ಎಂದರು.

ತಮ್ಮ ರಾಜಕೀಯ ಜೀವನದ ಕೇಂದ್ರವಾಗಿದ್ದ ಕಾಶಿ ವಿಶ್ವನಾಥ ದೇವಾಲಯದ ಆಶೀರ್ವಾದವೂ ಸದಾ ತಮ್ಮೊಂದಿಗಿದೆ ಎಂದು ಹೇಳಿದ ಅವರು, ಕೇದಾರನಾಥ ಧಾಮ ಪುನರ್‌ನಿರ್ಮಾಣ ಹಾಗೂ ಉಜ್ಜಯಿನಿಯ ಮಹಾಕಾಳ ಕ್ಷೇತ್ರದ ಅಭಿವೃದ್ಧಿಯ ಬಳಿಕ ಸುಮಾರು 1,000 ರಿಂದ 1,200 ವರ್ಷಗಳಷ್ಟು ಹಳೆಯದಾದ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ಸಂಬಂಧಿಸಿದ ಈ ಮಹತ್ವದ ಸಾಂಸ್ಕೃತಿಕ ಪರಂಪರೆಯ ಪುನರುತ್ಥಾನ ಕಾರ್ಯಕ್ಕೆ ಚಾಲನೆ ನೀಡಿರುವುದು ಅತ್ಯಂತ ಸ್ಮರಣೀಯ ಕ್ಷಣ ಎಂದರು.

ಇಂಡೋನೇಷ್ಯಾ ಪ್ರವಾಸದ ಮೂರನೇ ದಿನವೂ ಅಲ್ಲಿನ ವಾತಾವರಣ ಮತ್ತು ಜನಜೀವನದಲ್ಲಿ ಭಾರತೀಯ ಸಂಸ್ಕೃತಿಯ ಪರಿಮಳವನ್ನು ಅನುಭವಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು. ಸುಮಾರು 1,200 ವರ್ಷಗಳಿಂದ ಈ ಪರಂಪರೆಯನ್ನು ಸಂರಕ್ಷಿಸಿ ಉಳಿಸಿಕೊಂಡಿರುವ ಇಂಡೋನೇಷ್ಯಾ ಜನತೆ ಹಾಗೂ ಅಲ್ಲಿನ ಆಡಳಿತಗಾರರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಲ್ಹಾಸಾದಿಂದ ಕೈಲಾಸ ಮಾನಸಸರೋವರದವರೆಗೆ ಹಾಗೂ ಇಂಡೋನೇಷ್ಯಾದ ಪ್ರಂಬಾನನ್ ದೇವಾಲಯದವರೆಗೆ ಎಲ್ಲೆಡೆ ಓಂ ನಮಃ ಶಿವಾಯ ಮತ್ತು ಮಹಾಮೃತ್ಯುಂಜಯ ಮಂತ್ರದ ನಾದ ಕೇಳಿಬರುವುದು ಭಾವುಕ ಅನುಭವವಾಗಿದೆ ಎಂದು ಮೋದಿ ಹೇಳಿದರು. ಪುನರುತ್ಥಾನ ಕಾರ್ಯ ಪೂರ್ಣಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿಗೆ ಆಗಮಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಂಬಾನನ್ ದೇವಾಲಯವು ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಪ್ರತೀಕಗಳಲ್ಲಿ ಒಂದಾಗಿದೆ. ದೇವಾಲಯ ಸಂಕೀರ್ಣದಲ್ಲಿ ಶಿವ, ದುರ್ಗಾದೇವಿ ಹಾಗೂ ಗಣೇಶನ ಮೂರ್ತಿಗಳಿದ್ದು, ಶತಮಾನಗಳಿಂದ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ತಮಗೂ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಭಾಗ್ಯ ದೊರೆತಿದ್ದು, ಅದನ್ನು ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದೆಂದು ಬಣ್ಣಿಸಿದ ಪ್ರಧಾನಿ, ಭಾರತ–ಇಂಡೋನೇಷ್ಯಾ ಸ್ನೇಹ ಮತ್ತಷ್ಟು ಗಟ್ಟಿಯಾಗಲಿ, ಉಭಯ ದೇಶಗಳ ಜನರು ಸುಖ-ಸಮೃದ್ಧಿಯಿಂದ ಬದುಕಲಿ ಹಾಗೂ ಎರಡೂ ರಾಷ್ಟ್ರಗಳು ವೇಗವಾಗಿ ಅಭಿವೃದ್ಧಿ ಹೊಂದಲಿ ಎಂದು ಪ್ರಾರ್ಥಿಸಿದ್ದಾಗಿ ಹೇಳಿದರು.

2029ರೊಳಗೆ ಪುನರುತ್ಥಾನ ಯೋಜನೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಪ್ರಂಬಾನನ್ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದಾಗಿ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande