
ನವದೆಹಲಿ, 03 ಜುಲೈ (ಹಿ.ಸ.):
ಆ್ಯಂಕರ್:ಪವಿತ್ರ ಶ್ರೀ ಅಮರನಾಥ ಯಾತ್ರೆಯ ಶುಭಾರಂಭದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಕ್ತರಿಗೆ ಹಾರ್ದಿಕ ಶುಭಾಶಯಗಳು ಕೋರಿದ್ದಾರೆ.
ತಮ್ಮ ಸಂದೇಶದಲ್ಲಿ, ಶ್ರೀ ಅಮರನಾಥ ಯಾತ್ರೆಯು ಭಾರತದ ಸನಾತನ ಆಧ್ಯಾತ್ಮಿಕ ಪರಂಪರೆ, ಅಚಲ ಭಕ್ತಿ ಹಾಗೂ ಶಾಶ್ವತ ನಂಬಿಕೆಯ ಪ್ರತೀಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಶತಮಾನಗಳಿಂದ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಪವಿತ್ರ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಏಕತೆ, ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಜಾಗೃತಿಯಂತಹ ಭಾರತೀಯ ನಾಗರಿಕತೆಯ ಶಾಶ್ವತ ಜೀವನಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಗವಾನ್ ಶಿವನ ಕೃಪೆಯಿಂದ ಪ್ರತಿಯೊಬ್ಬ ಯಾತ್ರಿಕನಿಗೂ ಶಕ್ತಿ, ಶಾಂತಿ ಹಾಗೂ ಆಧ್ಯಾತ್ಮಿಕ ತೃಪ್ತಿ ಲಭಿಸಲಿ. ಎಲ್ಲರ ಯಾತ್ರೆಯೂ ಸುರಕ್ಷಿತ, ಸುಗಮ ಹಾಗೂ ಯಶಸ್ವಿಯಾಗಲಿ ಎಂದು ಉಪರಾಷ್ಟ್ರಪತಿ ಪ್ರಾರ್ಥಿಸಿದ್ದಾರೆ.
ಯಾತ್ರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಸಮಗ್ರ ವ್ಯವಸ್ಥೆಗಳನ್ನು ಕಲ್ಪಿಸಿರುವ ಆಡಳಿತ, ಭದ್ರತಾ ಪಡೆಗಳು, ಆರೋಗ್ಯ ಸಿಬ್ಬಂದಿ ಹಾಗೂ ಸೇವೆಯಲ್ಲಿ ತೊಡಗಿರುವ ಎಲ್ಲ ಸ್ವಯಂಸೇವಕರ ಅವಿರತ ಮತ್ತು ಸಮರ್ಪಿತ ಸೇವೆಯನ್ನು ಅವರು ಶ್ಲಾಘಿಸಿದ್ದು, ಅವರ ಪರಿಶ್ರಮಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.