ಕಾವೇರಿ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಹೆಚ್.ಡಿ. ಕುಮಾರಸ್ವಾಮಿ
ಹಾಸನ, 29 ಜುಲೈ (ಹಿ.ಸ.): ಆ್ಯಂಕರ್: ಕಾವೇರಿ ನೀರು ನಿರ್ವಹಣಾ ಮಂಡಳಿಯ ಕಠಿಣ ನಿರ್ಧಾರದಿಂದ ರಾಜ್ಯದ ಜನತೆ ಹಾಗೂ ಅನ್ನದಾತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಗಂಭೀರ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ನಾಡಿನ ಎಲ್ಲ ನಾಯಕರು ಹಾಗೂ ಪಕ್ಷಗಳು ಯಾವುದೇ ರಾಜಕೀಯ ಭಿನ್ನಭಿಪ್ರಾಯವಿಲ್ಲದೆ ಒಗ್ಗಟ್ಟ
HD Kumaraswamy Emotional Statement in Hassan


ಹಾಸನ, 29 ಜುಲೈ (ಹಿ.ಸ.):

ಆ್ಯಂಕರ್:

ಕಾವೇರಿ ನೀರು ನಿರ್ವಹಣಾ ಮಂಡಳಿಯ ಕಠಿಣ ನಿರ್ಧಾರದಿಂದ ರಾಜ್ಯದ ಜನತೆ ಹಾಗೂ ಅನ್ನದಾತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಗಂಭೀರ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ನಾಡಿನ ಎಲ್ಲ ನಾಯಕರು ಹಾಗೂ ಪಕ್ಷಗಳು ಯಾವುದೇ ರಾಜಕೀಯ ಭಿನ್ನಭಿಪ್ರಾಯವಿಲ್ಲದೆ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಹಾಸನದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಕೃಷಿ ಚಟುವಟಿಕೆಗಳಿಗೂ ನೀರಿಲ್ಲ, ಜನಸಾಮಾನ್ಯರ ಕುಡಿಯಲಿಕ್ಕೂ ಕೂಡ ಹನಿ ನೀರಿಲ್ಲದಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ಮಂಡಳಿ ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುವಂತೆ ಆದೇಶಿಸಿರುವುದು ಅತ್ಯಂತ ಖಂಡನೀಯ ಮತ್ತು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ನೀರಿನ ವಿವಾದದ ಹಿನ್ನೆಲೆ ಕುರಿತು ಮಾತನಾಡಿರುವ ಅವರು, ಈ ಕಾವೇರಿ ಸಮಸ್ಯೆ ಇಂದು ನಿನ್ನೆಯದಲ್ಲ, ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಜಲಾಶಯಗಳು ಭರ್ತಿಯಾಗಿ ತುಂಬಿ ಹರಿಯುವ ಸಂದರ್ಭದಲ್ಲಿ ಹೆಚ್ಚುವರಿ ನೀರು ನೇರವಾಗಿ ಸಮುದ್ರಕ್ಕೆ ಸೇರುತ್ತಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಆದರೆ, ತಮಿಳುನಾಡು ಸರ್ಕಾರ ಆ ನೀರನ್ನು ಸಮರ್ಪಕವಾಗಿ ಮತ್ತು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ, ಒಕ್ಕೂಟ ವ್ಯವಸ್ಥೆಯಲ್ಲಿ ಕಾವೇರಿ ಮತ್ತು ಕೃಷ್ಣಾ ಭಾಗದ ಕರ್ನಾಟಕದ ರೈತರಿಗೆ ಸದಾ ಕೆಟ್ಟ ತೀರ್ಮಾನಗಳೇ ಆಗುತ್ತಿವೆ. ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದ ಸಂದರ್ಭದಲ್ಲಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಪಾಲಾಗುವುದನ್ನು ತಪ್ಪಿಸಲು ಸರ್ಕಾರಗಳು ಮುಂದಾಗಬೇಕು. ಇದಕ್ಕಾಗಿ ರಾಜ್ಯದ ಕೆರೆ-ಕುಂಟೆಗಳನ್ನು ಸಮರ್ಪಕವಾಗಿ ಸಂರಕ್ಷಿಸಿ, ಮಳೆ ನೀರನ್ನು ಕೊಯ್ಲು ಮಾಡಿ ಉಳಿಸಿಕೊಳ್ಳುವ ದೀರ್ಘಕಾಲೀನ ಯೋಜನೆಗಳ ಕಡೆ ಸರ್ಕಾರಗಳು ಗಂಭೀರವಾಗಿ ಗಮನ ಹರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande