ತಮಿಳುನಾಡು ಮುಖ್ಯಮಂತ್ರಿ ಭೇಟಿಗೆ ಮುಕ್ತ ಸ್ವಾಗತ: ಡಿ.ಕೆ. ಶಿವಕುಮಾರ್
ನವ ದೆಹಲಿ, 29 ಜುಲೈ (ಹಿ.ಸ.) ಆ್ಯಂಕರ್: ತಮಿಳುನಾಡು ಮುಖ್ಯಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡಿ ಕಾವೇರಿ ನೀರಿನ ವಿಚಾರವಾಗಿ ಚರ್ಚೆ ನಡೆಸಲು ಇಂಗಿತ ವ್ಯಕ್ತಪಡಿಸಿದ್ದು, ಅತಿಥಿಯಾಗಿ ಬರುವ ಅವರನ್ನು ಗೌರವದಿಂದ ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಭೇಟಿಯ ಸಂದರ್ಭದಲ
ಸಂದರ್ಭಿಕ ಚಿತ್ರ


ನವ ದೆಹಲಿ, 29 ಜುಲೈ (ಹಿ.ಸ.)

ಆ್ಯಂಕರ್:

ತಮಿಳುನಾಡು ಮುಖ್ಯಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡಿ ಕಾವೇರಿ ನೀರಿನ ವಿಚಾರವಾಗಿ ಚರ್ಚೆ ನಡೆಸಲು ಇಂಗಿತ ವ್ಯಕ್ತಪಡಿಸಿದ್ದು, ಅತಿಥಿಯಾಗಿ ಬರುವ ಅವರನ್ನು ಗೌರವದಿಂದ ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಜಲಾನಯನ ಪ್ರದೇಶದ ವಾಸ್ತವಿಕ ಪರಿಸ್ಥಿತಿಯನ್ನು ಅವರಿಗೆ ಕಣ್ಣಾರೆ ತೋರಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿಗಳು ನಮ್ಮೊಂದಿಗೆ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಲು ಬಯಸಿದ್ದು, ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದಿರುವುದಲ್ಲದೆ, ತಮ್ಮ ಜತೆಗೂ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವಿವರಿಸಿದರು.

ಅತಿಥಿಯಾಗಿ ಬರುವ ಅವರನ್ನು ಗೌರವಯುತವಾಗಿ ಸ್ವಾಗತಿಸುವುದು ನಮ್ಮ ಕರ್ತವ್ಯ. ಹಾಗಾಗಿ ಖಂಡಿತ ಬನ್ನಿ ಎಂದು ನಾನು ಅವರಿಗೆ ಆಹ್ವಾನ ನೀಡಿದ್ದೇನೆ, ಕೇವಲ ಮಾತುಕತೆ ಮಾತ್ರವಲ್ಲದೆ ರಾಜ್ಯದ ನೈಜ ಪರಿಸ್ಥಿತಿ ಅವರಿಗೆ ತಿಳಿಯಬೇಕು ಎಂದರು.

ಅವರು ಬಂದ ಸಂದರ್ಭದಲ್ಲಿ ಕೇವಲ ಸಭೆಯಲ್ಲಿ ಮಾತನಾಡುವುದು ಮಾತ್ರವಲ್ಲದೆ, ನಮ್ಮ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ವಾಸ್ತವಿಕ ಪರಿಸ್ಥಿತಿಯನ್ನು ನೇರವಾಗಿ ಕಣ್ಣಾರೆ ವೀಕ್ಷಿಸಿ ಎಂದು ಮನವಿ ಮಾಡಿದ್ದೇನೆ.

ಅದಕ್ಕಾಗಿ ಕಾವೇರಿ ಜಲಾನಯನ ಪ್ರದೇಶದ ವೀಕ್ಷಣೆಗೆ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿಕೊಡುವುದಾಗಿಯೂ ತಿಳಿಸಿದ್ದೇನೆ. ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೇಗಿದೆ ಮತ್ತು ನಮ್ಮ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಅವರಿಗೆ ಪ್ರತ್ಯಕ್ಷ ಅನುಭವವಾದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande