
ನವದೆಹಲಿ, ಜುಲೈ 29(ಹಿ.ಸ.):
ಆ್ಯಂಕರ್:
ಗುರು ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದು, ಗುರುಗಳ ಮಹತ್ವವನ್ನು ಒತ್ತಿಹೇಳಿದ್ದಾರೆ. ಗುರುಗಳು ಕೇವಲ ಜ್ಞಾನವನ್ನು ನೀಡುವುದಲ್ಲ, ಶಿಷ್ಯರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಿ, ಉತ್ತಮ ವಿಚಾರಗಳು ಮತ್ತು ಸಂಸ್ಕಾರಗಳಿಂದ ಅವರನ್ನು ರೂಪಿಸುತ್ತಾರೆ ಎಂದು ಹೇಳಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ,
“ಪ್ರೇರಕಃ ಸೂಚಕಶ್ಚೈವ ವಾಚಕೋ ದರ್ಶಕಸ್ತಥಾ। ಶಿಕ್ಷಕಃ ಬೋಧಕಶ್ಚೈವ ಷಡೆತೇ ಗುರುವಃ ಸ್ಮೃತಾಃ॥”
ಎಂದು ಉಲ್ಲೇಖಿಸಿದ್ದಾರೆ.
ಈ ಸುಭಾಷಿತದ ಅರ್ಥವನ್ನು ವಿವರಿಸಿದ ಅವರು, ಜೀವನದಲ್ಲಿ ಪ್ರೇರಣೆ ನೀಡುವವರು, ಸರಿಯಾದ ದಾರಿಯನ್ನು ತೋರಿಸುವವರು, ಜ್ಞಾನ ಮತ್ತು ಸತ್ಯದ ಅರಿವು ಮೂಡಿಸುವವರು, ಮಾರ್ಗದರ್ಶನ ಮಾಡುವವರು, ಶಿಕ್ಷಣ ನೀಡುವವರು ಹಾಗೂ ಆತ್ಮವಿಕಾಸಕ್ಕೆ ನೆರವಾಗುವವರು – ಇವರೆಲ್ಲರೂ ಗುರುಗಳೆಂದು ಸ್ಮರಿಸಲ್ಪಡುತ್ತಾರೆ ಎಂದು ತಿಳಿಸಿದ್ದಾರೆ.
ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿರುವ ಪ್ರಧಾನಿ, ಜ್ಞಾನ ನೀಡುವುದರ ಜೊತೆಗೆ ಶಿಷ್ಯರಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಗುರುಗಳ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.