ಜಾರ್ಖಂಡ್: ಒಂದು ಕೋಟಿ ರೂಪಾಯಿ ಬಹುಮಾನ ಘೋಷಿತ ಮಾವೋವಾದಿ ಮಿಸಿರ್ ಬೇಸರಾ ಬಂಧನ
ರಾಂಚಿ, ಜುಲೈ 29 (ಹಿ.ಸ.): ಆ್ಯಂಕರ್:ಜಾರ್ಖಂಡ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ದೊರೆತಿದೆ. ನಿಷೇಧಿತ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿತ ಮಾವೋವಾದಿ ಮಿಸಿರ್ ಬೇಸರಾ ಅಲಿ
मिसिर बेसरा की फाइल फोटो


ರಾಂಚಿ, ಜುಲೈ 29 (ಹಿ.ಸ.):

ಆ್ಯಂಕರ್:ಜಾರ್ಖಂಡ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ದೊರೆತಿದೆ. ನಿಷೇಧಿತ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿತ ಮಾವೋವಾದಿ ಮಿಸಿರ್ ಬೇಸರಾ ಅಲಿಯಾಸ್ ಸಾಗರ್ ದಾ ಅವರನ್ನು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಗಿರಿಡಿಹ್–ಧನಬಾದ್ ಗಡಿ ಪ್ರದೇಶದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಮಿಸಿರ್ ಬೇಸರಾ ತನ್ನ ನಾಲ್ವರು ಸಹಚರರೊಂದಿಗೆ ಟಾಟಾ ಮ್ಯಾಜಿಕ್ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಭದ್ರತಾ ಪಡೆಗಳು ಧನಬಾದ್‌ನ ಬರ್ವಾಅಡ್ಡಾ ಪ್ರದೇಶದಲ್ಲಿ ವಾಹನವನ್ನು ಸುತ್ತುವರಿದು ಬಂಧಿಸಿವೆ.

ಜಾರ್ಖಂಡ್ ಪೊಲೀಸ್ ಹಾಗೂ ಸಿಆರ್‌ಪಿಎಫ್‌ನ ಜಂಟಿ ತಂಡಕ್ಕೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಯಶಸ್ಸು ದೊರೆತಿದೆ. ವಾಹನದಿಂದ ಮೂರು ಎಕೆ–47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೇಸರಾ ಜೊತೆಗೆ ಪ್ರಾದೇಶಿಕ ಸಮಿತಿ ಸದಸ್ಯ ತುಂಭಾ ಮಾಂಜಿ, ಪ್ರದೇಶ ಸಮಿತಿ ಸದಸ್ಯ ಬಿರೇನ್ ಹಾನ್ಸ್ದಾ ಹಾಗೂ ಮಂಗಲ್ ಮುರ್ಮು ಮತ್ತು ದಿನೇಶ್ ರಾಯ್ ಅವರನ್ನು ಸಹ ಬಂಧಿಸಲಾಗಿದೆ. ಬಂಧಿತರನ್ನು ಕೇಂದ್ರ ಹಾಗೂ ರಾಜ್ಯ ಭದ್ರತಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ.

ಜಾರ್ಖಂಡ್ ಐಜಿ ನರೇಂದ್ರ ಕುಮಾರ್ ಸಿಂಗ್ ಬಂಧನವನ್ನು ದೃಢಪಡಿಸಿದ್ದಾರೆ. ಮಿಸಿರ್ ಬೇಸರಾ ವಿರುದ್ಧ ಜಾರ್ಖಂಡ್‌ನಲ್ಲಿ 141 ಪ್ರಕರಣಗಳು ದಾಖಲಾಗಿದ್ದು, ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಆತ ಸಕ್ರಿಯನಾಗಿದ್ದನೆಂದು ತಿಳಿದುಬಂದಿದೆ. ಭದ್ರತಾ ಪಡೆಗಳ ಮೇಲೆ ದಾಳಿ, ಕೊಲೆ, ಲೇವಿ ವಸೂಲಿ ಮತ್ತು ಸ್ಫೋಟಕ ದಾಳಿಗಳಂತಹ ಗಂಭೀರ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂಬ ಆರೋಪಗಳಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande