
ನವದೆಹಲಿ, 28 ಜುಲೈ (ಹಿ.ಸ.):
ಆ್ಯಂಕರ್:ಪ್ರಕೃತಿಯ ಸಂರಕ್ಷಣೆ ಮತ್ತು ಗೌರವದಲ್ಲಿಯೇ ಮಾನವಕುಲದ ಕಲ್ಯಾಣ ಅಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಭಾರತೀಯ ಸಂಪ್ರದಾಯದ ಧರ್ಮಸಮ್ಮತ ಆಚರಣೆಯಾಗಿದ್ದು, ಇದೇ ಮೌಲ್ಯವನ್ನು ನಮ್ಮ ಪರಂಪರೆ ಸಾರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದ ಪ್ರಧಾನಿ, ಇಂದ್ರನ ನೇತೃತ್ವದ ಲೋಕಪಾಲಕರು, ಆರು ಋತುಗಳು, ತಿಂಗಳುಗಳು, ವರ್ಷಗಳು, ದಿನಗಳು ಹಾಗೂ ಮುಹೂರ್ತಗಳು ಸದಾ ಶುಭವನ್ನು ಕರುಣಿಸಲಿ. ಶ್ರುತಿ, ಸ್ಮೃತಿ ಮತ್ತು ಧರ್ಮವು ಎಲ್ಲ ದಿಕ್ಕುಗಳಿಂದಲೂ ಮಾನವನನ್ನು ರಕ್ಷಿಸಲಿ ಎಂದು ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.