
ಜಮ್ಮು, ಜುಲೈ 28(ಹಿ.ಸ.):
ಆ್ಯಂಕರ್:ಶ್ರೀ ಅಮರನಾಥ ಯಾತ್ರೆಯ ಅಂಗವಾಗಿ 3,029 ಯಾತ್ರಿಕರ 21ನೇ ತಂಡವು ಮಂಗಳವಾರ ಮುಂಜಾನೆ ಜಮ್ಮುವಿನ ಭಗವತಿ ನಗರ ಯಾತ್ರಿನಿಲಯದಿಂದ ಬಿಗಿ ಭದ್ರತೆಯ ನಡುವೆ ಬಾಲ್ಟಾಲ್ ಮೂಲ ಶಿಬಿರದತ್ತ ಪ್ರಯಾಣ ಬೆಳೆಸಿತು.
151 ವಾಹನಗಳ ಬೆಂಗಾವಲಿನಲ್ಲಿ 57 ಬಸ್‌ಗಳು, 30 ಮಧ್ಯಮ ಗಾತ್ರದ ವಾಹನಗಳು, 58 ಲಘು ವಾಹನಗಳು ಹಾಗೂ 6 ದ್ವಿಚಕ್ರ ವಾಹನಗಳು ಸೇರಿದ್ದವು. ಈ ತಂಡದಲ್ಲಿ 2,310 ಪುರುಷರು, 590 ಮಹಿಳೆಯರು, 14 ಮಕ್ಕಳು, 45 ಸಾಧುಗಳು, 40 ಸಾಧ್ವಿಯರು ಹಾಗೂ 30 ವಿದೇಶಿ ಪುರುಷ ಯಾತ್ರಿಕರು ಇದ್ದರು.
ಇಂದೂ ಪಹಲ್ಗಾಮ್ ಮಾರ್ಗಕ್ಕೆ ಯಾವುದೇ ಯಾತ್ರಿಕರ ತಂಡವನ್ನು ಕಳುಹಿಸಲಾಗಿಲ್ಲ. ಈ ಹೊಸ ತಂಡದೊಂದಿಗೆ ಜಮ್ಮು ಮೂಲ ಶಿಬಿರದಿಂದ ಈ ವರ್ಷದ ಅಮರನಾಥ ಯಾತ್ರೆಗೆ ಇದುವರೆಗೆ ಹೊರಟಿರುವ ಯಾತ್ರಿಕರ ಒಟ್ಟು ಸಂಖ್ಯೆ 1,30,355ಕ್ಕೆ ಏರಿಕೆಯಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.