ಅಮೆರಿಕಾ–ಇರಾನ್ ದಾಳಿ ತಾತ್ಕಾಲಿಕ ಸ್ಥಗಿತ; ಹೋರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸ್ಫೋಟ
ಟೆಹ್ರಾನ್/ವಾಷಿಂಗ್ಟನ್, ಜುಲೈ 27(ಹಿ.ಸ.): ಆ್ಯಂಕರ್: ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ನೇರ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್ ಒಂದು ಭೂಸುರಂಗಕ್ಕ
यह स्क्रीन ग्रैब अमेरिकी मध्य कमान ने 26 जुलाई को जारी किया है। इसमें ईरान के खिलाफ नौसैनिक नाकाबंदी को दिखाया गया है।


ಟೆಹ್ರಾನ್/ವಾಷಿಂಗ್ಟನ್, ಜುಲೈ 27(ಹಿ.ಸ.):

ಆ್ಯಂಕರ್:

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ನೇರ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್ ಒಂದು ಭೂಸುರಂಗಕ್ಕೆ ತಾಗಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಇರಾನ್ ಅಧಿಕಾರಿಗಳ ಸೂಚನೆಯನ್ನು ಲೆಕ್ಕಿಸದೆ ಟ್ಯಾಂಕರ್ ಮುಂದುವರಿದಿದ್ದರಿಂದ ಈ ಘಟನೆ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಹೋರ್ಮುಜ್ ಜಲಸಂಧಿಯಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿದ್ದರೂ, ಈ ಸ್ಫೋಟದೊಂದಿಗೆ ಮತ್ತೆ ಆತಂಕದ ವಾತಾವರಣ ಉಂಟಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇನೆಯ ಶಸ್ತ್ರಾಸ್ತ್ರ ಸಂಗ್ರಹ ಕಡಿಮೆಯಾಗಿದೆ ಎಂಬ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದೇ ವೇಳೆ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ, ಅಮೆರಿಕವು ಈ ಹಿಂದಿನ ರಾಜತಾಂತ್ರಿಕ ಮಾತುಕತೆಗಳನ್ನು ವಿಫಲಗೊಳಿಸಿದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಉಭಯ ರಾಷ್ಟ್ರಗಳು ಮಧ್ಯವರ್ತಿಗಳ ಮೂಲಕ ಪರಸ್ಪರ ಸಂದೇಶಗಳ ವಿನಿಮಯವನ್ನು ಮುಂದುವರಿಸುತ್ತಿವೆ ಎಂದು ತಿಳಿದುಬಂದಿದೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಮೈಕ್ ವಾಲ್ಟ್ಜ್ ಅವರ ಪ್ರಕಾರ, ಇರಾನ್‌ನ ಸೇನಾ ನೆಲೆಗಳ ಮೇಲೆ ಸತತ 13ನೇ ರಾತ್ರಿ ನಡೆದ ದಾಳಿಗಳ ಬಳಿಕ ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಂಪ್ ಆಡಳಿತವು ಅನಿರ್ದಿಷ್ಟಾವಧಿಗೆ ದಾಳಿಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ಇನ್ನೊಂದೆಡೆ, ಇರಾನ್ ಸೇನೆಯು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲಿನ ಪ್ರತಿದಾಳಿಗಳನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಪ್ರಕಟಿಸಿದೆ. ಇದೇ ವೇಳೆ ಪಾಕಿಸ್ತಾನ, ಕತಾರ್ ಹಾಗೂ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳು ಅಮೆರಿಕಾ ಮತ್ತು ಇರಾನ್ ಅನ್ನು ಮತ್ತೆ ಶಾಂತಿ ಮಾತುಕತೆಯ ಮೇಜಿನತ್ತ ಕರೆತರಲು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿವೆ.

ಇದರ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಲಾದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಅಮೆರಿಕದ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಿ ದೇಶವನ್ನು “ವಿಶ್ವದ ರಕ್ಷಕ” ಎಂದು ಬಿಂಬಿಸಲಾಗಿದೆ. ಈ ಚಿತ್ರಗಳು ಅಮೆರಿಕದ ರಾಜಕೀಯ ಹಾಗೂ ಜಾಗತಿಕ ಪ್ರಭಾವದ ಸಂದೇಶವನ್ನೂ ಪ್ರತಿಬಿಂಬಿಸುತ್ತಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande