ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್
ಬಳ್ಳಾರಿ, 26 ಜುಲೈ (ಹಿ.ಸ.) ಆ್ಯಂಕರ್ : ಸಮಾಜದಲ್ಲಿ ಮಾಧ್ಯಮಗಳು, ಹೋರಾಟಗಾರರು ಮತ್ತು ಸಂಘಟನೆಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗಲಿದೆ, ಅಭಿವೃದ್ಧಿಯನ್ನೂ ಸಾಧಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್
ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್


ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್


ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್


ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್


ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅಭಿವೃದ್ಧಿ ಸಾಧ್ಯ : ಡಿಸಿ ಕೆ. ನಾಗೇಂದ್ರ ಪ್ರಸಾದ್


ಬಳ್ಳಾರಿ, 26 ಜುಲೈ (ಹಿ.ಸ.)

ಆ್ಯಂಕರ್ : ಸಮಾಜದಲ್ಲಿ ಮಾಧ್ಯಮಗಳು, ಹೋರಾಟಗಾರರು ಮತ್ತು ಸಂಘಟನೆಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಲ್ಲಿ ಅನೇಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗಲಿದೆ, ಅಭಿವೃದ್ಧಿಯನ್ನೂ ಸಾಧಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ `ಗಾಂಧಿಭವನ'ದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಏರ್ಪಡಿಸಿದ್ದ `182 ನೇ ಪತ್ರಿಕಾ ದಿನಾಚರಣೆ ಯನ್ನು' ಭಾನುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ದೈನಂದಿನ ಆಡಳಿತದಲ್ಲಿ ಅಧಿಕಾರಿವರ್ಗ ಅತ್ಯಂತ ಜವಾಬ್ದಾರಿಯುತವಾಗಿ, ಉತ್ತಮವಾಗಿ, ಎಚ್ಚರಿಕೆಯಿಂದ ಕರ್ತವ್ಯವನ್ನು ನಿರ್ವಹಿಸಲು ಮಾಧ್ಯಮಗಳ ಪಾತ್ರ ಅತಿ ಮುಖ್ಯ. ಅಲ್ಲದೇ, ಹೋರಾಟಗಾರರು ಮತ್ತು ಸಂಘಟನೆಗಳ ಸಲಹೆ - ಸೂಚನೆಗಳೂ ಪೂರಕವಾಗುತ್ತವೆ ಎಂದರು.

ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುವುದು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಹೋರಾಡುವುದು, ಬಾಲ್ಯ ವಿವಾಹದ ವಿರುದ್ಧ, ಬಾಲ ಗರ್ಭಿಣಿಯರಾಗುವುದರ ವಿರುದ್ಧ ಜಾಗೃತಿ ಮೂಡಿಸುವುದು ಮಾಧ್ಯಮಗಳಿಂದ ಸುಲಭ ಸಾಧ್ಯ ಎಂದರು.

ಬುದ್ಧಿವಂತರು ಹೆಚ್ಚಿರುವಲ್ಲಿ ಭಿನ್ನಾಭಿಪ್ರಾಯಗಳು - ಗುಂಪುಗಾರಿಕೆ ಸಹಜ. ಈ ಸಮಸ್ಯೆ ಮಾಧ್ಯಮಗಳನ್ನು ಕಾಡಬಾರದು. ಸಿಎಸ್ಆರ್ ನಿಧಿಯಲ್ಲಿ ಪತ್ರಕರ್ತರಿಗಾಗಿ ಒಂದು ವಾಹನ, ಸೂಕ್ತವಾದ ಕಟ್ಟಡವನ್ನು ನಿರ್ಮಿಸಿಕೊಡಲಾಗುತ್ತದೆ. ಜಿಲ್ಲಾ ವಾರ್ತಾಭವನವನ್ನು ಗಾಂಧಿಭವನಕ್ಕೆ ಸ್ಥಳಾಂತರ ಮಾಡುವ ಪ್ರಯತ್ನ ನಡೆದಿದೆ ಎಂದರು.

ವಿವಿಧ ಕೈಗಾರಿಕೆಗಳ ಸಿಎಸ್ಆರ್ ನಿಧಿಯಿಂದ ಮಾಧ್ಯಮದ ಪ್ರತಿನಿಧಿಗಳು ಮತ್ತು ಅವರ ಕುಟುಂಬದ ಸದಸ್ಯರ ಆರೋಗ್ಯ ಚಿಕಿತ್ಸೆಗಾಗಿ ಸೂಕ್ತವಾದ ವ್ಯವಸ್ಥೆ ಮಾಡಲು, ಮಕ್ಕಳಿಗೆ ಶಿಕ್ಷಣದ ಸೌಲಭ್ಯವನ್ನು ಒದಗಲಿಸಲು ಪ್ರಯತ್ನಿಸಲಾಗುತ್ತದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿರುವ ಹಿರಿಯ ಪತ್ರಕರ್ತ ಕೆ. ನಿಂಗಜ್ಜ ಅವರು,

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಮಾಧ್ಯಮಗಳ ಸೌಹಾರ್ದ ಸಂಬಂಧದ ಕುರಿತು ಉಪನ್ಯಾಸ ನೀಡಿ, ಅಕಾಡೆಮಿಯು ಮಾಧ್ಯಮ ಪ್ರತಿನಿಧಿಗಳಿಗೆ ನೀಡುವ ಸೌಲಭ್ಯ, ವೃತ್ತಿ ಕೌಶಲ್ಯ ಹೆಚ್ಚಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ. ಸುಮನ್ ಡಿ. ಪೆನ್ನೇಕರ್ ಅವರು, ಸಾಮಾಜಿಕ ಬದ್ಧತೆಯಿಂದ ಪ್ರತಿಯೊಬ್ಬರು ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ ಎಂದರು.

ವಾರ್ತಾ ಇಲಾಖೆಯ ಹಿರಿಯ ಸಾಹಾಯಕ ನಿರ್ದೇಶಕರಾಗಿರುವ ಬಿ.ವಿ. ತುಕರಾಂ ಅವರು,

ಮಾಧ್ಯಮ ಸಂಸ್ಥೆಗಳು ಅವರ ಪ್ರತಿನಿಧಿಗಳಿಗೆ ಸಾಮಾಜಿಕ ಭದ್ರತೆಯನ್ನು ನೀಡುತ್ತಿಲ್ಲ, ಕಾರಣ ಅನೇಕ ಬಹುತೇಕ ಪತ್ರಕರ್ತರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಎನ್. ವೀರಭದ್ರಗೌಡ ಅವರು, ಸಂಘದ ಕಾರ್ಯಚಟುವಟಿಕೆ, ಸಂಘದ ಮಹತ್ವ, ಸದಸ್ಯರಿಗೆ ಇರುವ ಸೌಲಭ್ಯಗಳನ್ನು ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ವಿವರಿಸಿದರು.

ದಶಕಗಳಿಂದ ದಿನ ಪತ್ರಿಕೆಗಳನ್ನು ವಿತರಣೆ ಮಾಡುತ್ತಿರುವ ಬಳ್ಳಾರಿಯ ಶಿವಾಜಿ ಮರಾಠಿ, ರಾಜಶೇಖರ, ಸಿರುಗುಪ್ಪದ ಪಿ. ಹುಸೇನ್ಸಾಬ್ ಮತ್ತು ಕಂಪ್ಲಿಯ ವೈ.ಬಿ. ಆನಂದರಾವ್ ಅವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ - ಅಭಿನಂದಿಸಲಾಯಿತು. ಅಲ್ಲದೇ, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಿರುಗುಪ್ಪದ ಪತ್ರಕರ್ತರಾಗಿರುವ ಮಾರೆಪ್ಪ ಅವರಿಗೆ ಚೆಕ್ ವಿತರಣೆ ಮಾಡಲಾಯಿತು.

ಕಲಾವಿದ ಹುಲುಗಪ್ಪ ಅವರು ಪ್ರಾರ್ಥನೆ ಸಲ್ಲಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಹೆಚ್. ಹುಲಗಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande