ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ದೇಶದ ನಿರ್ಮಾಣ ಸಾಧ್ಯ : ಅವ್ವಾರು ಮಂಜುನಾಥ್
ಬಳ್ಳಾರಿ, 26 ಜುಲೈ (ಹಿ.ಸ.) ಆ್ಯಂಕರ್: ಆರೋಗ್ಯಯುತ ಸಮಾಜದಿಂದ ಆರೋಗ್ಯವಂತ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬ
ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ದೇಶದ ನಿರ್ಮಾಣ ಸಾಧ್ಯ : ಅವ್ವಾರು ಮಂಜುನಾಥ್


ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ದೇಶದ ನಿರ್ಮಾಣ ಸಾಧ್ಯ


ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ದೇಶದ ನಿರ್ಮಾಣ ಸಾಧ್ಯ


ಆರೋಗ್ಯವಂತ ಸಮಾಜದಿಂದ ಆರೋಗ್ಯವಂತ ದೇಶದ ನಿರ್ಮಾಣ ಸಾಧ್ಯ


ಬಳ್ಳಾರಿ, 26 ಜುಲೈ (ಹಿ.ಸ.)

ಆ್ಯಂಕರ್: ಆರೋಗ್ಯಯುತ ಸಮಾಜದಿಂದ ಆರೋಗ್ಯವಂತ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಮತ್ತು ಸುಭದ್ರ ಹೆಲ್ತ್ ಕೇರ್ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ `ಉಚಿತ ಆರೋಗ್ಯ ಶಿಬಿರ'ದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ಆರೋಗ್ಯವಂತ ವ್ಯಕ್ತಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವುದರ ಜೊತೆಯಲ್ಲಿ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಜನಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಸಲ್ಲಿಸುವಲ್ಲಿ ಮುತುವರ್ಜಿಯನ್ನು ವಹಿಸಿದೆ ಎಂದರು.

ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದ ಬಳ್ಳಾರಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕೇವಲ ವ್ಯಾಪಾರ - ವಾಣಿಜ್ಯೋದ್ಯಮಿಗಳಿಗೆ ಸೀಮಿತ ಆಗದೇ ಆರೋಗ್ಯ, ಕೌಶಲ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪೆನ್ನೇಕರ್ ಅವರು, ಮುಖ್ಯ ಅತಿಥಿಗಳಾಗಿ, ಆರೋಗ್ಯ ಪ್ರತಿಯೊಬ್ಬರ ಭಾಗ್ಯ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಾರ್ವಜನಿಕರು ಮತ್ತು ಸಂಸ್ಥೆಯ ಆಜೀವ ಸದಸ್ಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿರುವುದು ಸಂಸ್ಥೆಯ ಸೇವಾ ಮನೋಭಾವವನ್ನು ತೋರುತ್ತದೆ ಎಂದರು.

ಸ್ಪರ್ಶ್ ಆಸ್ಪತ್ರೆಯ ಡಾ. ಸಂದೀಪ್ ಆರ್. ಮಾಲಬಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಶ್ ಆಸ್ಪತ್ರೆಯು ವಚನ ಮತ್ತು ಗುರುವಂದನಾ ಯೋಜನೆಗಳ ಮೂಲಕ ಮಕ್ಕಳು ಹಾಗೂ ಅರ್ಹ ಶಿಕ್ಷಕರಿಗೆ ಉಚಿತ ಚಿಕಿತ್ಸೆ. ಅಲ್ಲದೇ, ಕುಟುಂಬ ಕಾರ್ಡ್ ಅನ್ನು ಪರಿಚಯಿಸಿ, ರಿಯಾಯಿತಿಯನ್ನು ನೀಡುತ್ತಿದೆ. ನಾಡಿನಾದ್ಯಂತ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ, ನಾಡಿನ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿದೆ ಎಂದರು.

ಪ್ರಭಾರಿ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸಾರೆಡ್ಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಶ್ ಆಸ್ಪತ್ರೆಯ ವಿಶ್ವನಾಥ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ. ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿದರು.

ಒಂದು ಸಾವಿರಕ್ಕೂ ಹೆಚ್ಚಿನ ಜನರು ಈ ಶಿಬಿರದಲ್ಲಿ ಪಾಲ್ಗೊಂಡು ಅರೋಗ್ಯ ತಪಾಸಣೆ ಮಾಡಿಸಿಕೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande