ಲೋಕಾಂಟೊ ಆಪ್ ನಂಬಿ ಹೋದ ವ್ಯಕ್ತಿಯ ಅಪಹರಣ ಹಾಗೂ ಸುಲಿಗೆ ಪ್ರಕರಣ; 11 ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ಬೆಂಗಳೂರು, 20 ಜುಲೈ (ಹಿ.ಸ.): ಆ್ಯಂಕರ್ : ಆನ್ಲೈನ್ ಲೋಕಾಂಟೊ ಆಪ್ ಮೂಲಕ ಯುವತಿಯರ ಪರಿಚಯದ ಆಮಿಷವೊಡ್ಡಿ, ಮೀಟಿಂಗ್ಗೆಂದು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹಣ ಹಾಗೂ ಒಡವೆಗಳನ್ನು ಸುಲಿಗೆ ಮಾಡಿದ್ದ ಕುಖ್ಯಾತ ಗ್ಯಾಂಗ್ ಒಂದನ್ನು ಸಿಸಿಬಿ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೆ
Bengaluru


ಬೆಂಗಳೂರು, 20 ಜುಲೈ (ಹಿ.ಸ.):

ಆ್ಯಂಕರ್ :

ಆನ್ಲೈನ್ ಲೋಕಾಂಟೊ ಆಪ್ ಮೂಲಕ ಯುವತಿಯರ ಪರಿಚಯದ ಆಮಿಷವೊಡ್ಡಿ, ಮೀಟಿಂಗ್ಗೆಂದು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹಣ ಹಾಗೂ ಒಡವೆಗಳನ್ನು ಸುಲಿಗೆ ಮಾಡಿದ್ದ ಕುಖ್ಯಾತ ಗ್ಯಾಂಗ್ ಒಂದನ್ನು ಸಿಸಿಬಿ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ.

ಕೆ.ಜಿ. ಹಳ್ಳಿಯ ಎಚ್.ಆರ್.ಬಿ.ಆರ್. ಲೇಔಟ್ನಲ್ಲಿ ಈ ಕೃತ್ಯ ನಡೆದಿದ್ದು, ಚೇತನ್, ಮನು, ಶಾಬು, ಮಂಜುನಾಥ್, ಜಯಕುಮಾರ್, ಅರುಣ್ ಕೀರ್ತಿ, ಕಾಂತ ರಾಜು, ಸಂದೀಪ್ ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕಾಂಟೊ ಆಪ್ನಲ್ಲಿ ಯುವತಿಯರ ನಕಲಿ ಪೋಸ್ಟ್ ನೋಡಿ ಸಂತ್ರಸ್ತ ವ್ಯಕ್ತಿ ಹೆಚ್.ಆರ್.ಬಿ.ಆರ್. ಲೇಔಟ್ಗೆ ತೆರಳಿದ್ದರು. ಅಲ್ಲಿ ಆಟೋದಲ್ಲಿ ಕುಳಿತಿದ್ದ ಜೀಬಾ ಖಾನ್ ಮತ್ತು ದೀಪಾ ಎಂಬುವವರನ್ನು ಭೇಟಿಯಾಗಲು ಹೋದಾಗ, ಮುಂಚಿತವಾಗಿ ಹೊಂಚು ಹಾಕಿದ್ದ ಆರೋಪಿಗಳು ಆತನನ್ನು ಬಲವಂತವಾಗಿ ಆಟೋದಲ್ಲಿ ಹತ್ತಿಸಿಕೊಂಡು ನಗರದ ವಿವಿಧಡೆ ಸುತ್ತಾಡಿಸಿದ್ದಾರೆ. ಬಳಿಕ ಬೆದರಿಸಿ ಆತನ ಬಳಿಯಿದ್ದ ಹಣ, ಮೊಬೈಲ್ ಹಾಗೂ ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಆಟೋಗಳು, ನಾಲ್ಕು ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದ್ದು, ಈ ಗ್ಯಾಂಗ್ನಿಂದ ಹಲವರಿಗೆ ವಂಚನೆಯಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande