
ಬಳ್ಳಾರಿ, 02 ಜುಲೈ (ಹಿ.ಸ.)
ಆ್ಯಂಕರ್ : ಆಧ್ಯಾತ್ಮಿಕ ಚಿಂತಕರು ಗದಗ-ವಿಜಯಪುರದ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರೂ ಆಗಿರುವ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಜುಲೈ 5 ರ ಭಾನುವಾರ ಸಂಜೆ 6.15ಕ್ಕೆ ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ `ಪಾಂಚಜನ್ಯ’ದಲ್ಲಿ ನಡೆಯುವ ವಿವೇಕಮಂಟಪ ಉಪನ್ಯಾಸ ಮಾಲಿಕೆಯಲ್ಲಿ `ವಿವೇಕ ಲೀಲಾಮೃತ’ ಉಪನ್ಯಾಸ ನೀಡಲಿದ್ದಾರೆ.
ಬೆಳಗಲ್ಲು ಹನುಮಂತ ಹಾಗೂ ಬೆಳಗಲ್ಲು ರೇಖಾ ಅವರಿಂದ ಭಕ್ತಿಸಂಗೀತ. ಮುದ್ದಟನೂರು ತಿಪ್ಪೇಸ್ವಾಮಿ ಹಾರ್ಮೋನಿಯಂ ಹಾಗೂ ಎಂ. ವೀರೇಶ್ ಕುರುಗೋಡು ತಬಲಾ ಸಾಥ್ ನೀಡುವರು.
ಯುವಜನರಲ್ಲಿ ಧನಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕøತಿಯನ್ನು ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಬಳ್ಳಾರಿ ಭಾಗದ ಭಕ್ತರ ಒತ್ತಾಸೆಯಂತೆ ಪ್ರತಿ ತಿಂಗಳ ಮೊದಲ ಭಾನುವಾರ `ಪಾಂಚಜನ್ಯ’ ಸಭಾಂಗಣದಲ್ಲಿ ವಿವೇಕಾನಂದರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡುತ್ತಿದ್ದಾರೆ.
ವಿವೇಕ ಮಂಟಪ ಸಂಯೋಜಕರು, ಪ್ರಭುದೇವ ಕಪ್ಪಗಲ್ಲು, ಮೊಬೈಲ್ ಸಂಖ್ಯೆ 95133 93113 ಗೆ ಸಂಪರ್ಕಿಸಿರಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್