ನಿರಂತರ ಪ್ರಯತ್ನವೇ ಯಶಸ್ಸಿನ ನಿಜವಾದ ಗುಟ್ಟು: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, 02 ಜುಲೈ (ಹಿ.ಸ.): ಆ್ಯಂಕರ್: ನಿರಂತರ ಪ್ರಯತ್ನವೇ ಯಶಸ್ಸಿನ ನಿಜವಾದ ಗುಟ್ಟು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೀವನದಲ್ಲಿ ತಾಳ್ಮೆ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ನಿರಂತರವಾಗಿ ಮುನ್ನಡೆಯುವ ವ್ಯಕ್ತಿಯೇ ತನ್ನ ಗುರಿಯನ್ನು ತಲುಪುತ್ತಾನೆ ಎಂದು ಅವರು ತಿಳಿಸಿದ್ದಾರೆ
Pm file photo


ನವದೆಹಲಿ, 02 ಜುಲೈ (ಹಿ.ಸ.):

ಆ್ಯಂಕರ್:

ನಿರಂತರ ಪ್ರಯತ್ನವೇ ಯಶಸ್ಸಿನ ನಿಜವಾದ ಗುಟ್ಟು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೀವನದಲ್ಲಿ ತಾಳ್ಮೆ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ನಿರಂತರವಾಗಿ ಮುನ್ನಡೆಯುವ ವ್ಯಕ್ತಿಯೇ ತನ್ನ ಗುರಿಯನ್ನು ತಲುಪುತ್ತಾನೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುಭಾಷಿತವೊಂದನ್ನು ಹಂಚಿಕೊಂಡ ಪ್ರಧಾನಿ, ನಾನಾಶ್ರಾಂತಾಯ ಶ್ರೀರಸ್ತೀತಿ ರೋಹಿತ ಶುಶ್ರುಮ। ಪಾಪೋ ನೃಷದ್ವರೋ ಜನ ಇಂದ್ರ ಇಚ್ಚರತಃ ಸಖಾ ಚರೈವೇತಿ॥ ಎಂಬ ಶ್ಲೋಕವನ್ನು ಉಲ್ಲೇಖಿಸಿದರು.

ಈ ಸುಭಾಷಿತದ ಅರ್ಥವನ್ನು ವಿವರಿಸಿದ ಅವರು, ಎಂದಿಗೂ ದಣಿದು ನಿಲ್ಲದ ವ್ಯಕ್ತಿಗೇ ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ. ಆಲಸ್ಯ ಮತ್ತು ನಿಷ್ಕ್ರಿಯತೆ ಮನುಷ್ಯನನ್ನು ಗುರಿಯಿಂದ ದೂರ ಮಾಡುತ್ತದೆ. ಆದರೆ ನಿರಂತರ ಪರಿಶ್ರಮ, ಸತತ ಕಾರ್ಯ ಮತ್ತು ಮುನ್ನಡೆಯುವ ಮನೋಭಾವ ಹೊಂದಿರುವ ವ್ಯಕ್ತಿಯೇ ಯಶಸ್ಸನ್ನು ಸಾಧಿಸುತ್ತಾನೆ ಎಂದು ಹೇಳಿದರು.

ಧೈರ್ಯ, ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸದೊಂದಿಗೆ ನಿರಂತರ ಪ್ರಯತ್ನ ಮಾಡುವವರ ಬೆನ್ನಿಗೆ ಯಶಸ್ಸೇ ನಿಲ್ಲುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಗುರಿಯತ್ತ ಅಚಲ ಮನೋಭಾವದಿಂದ ಮುನ್ನಡೆಯಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande