ವಿಶೇಷಚೇತನ ಮಕ್ಕಳ ಕೇಂದ್ರ ; ಹೊರಗುತ್ತಿಗೆ ಆಧಾರದ ನೇಮಕಾತಿ: ಜುಲೈ 4 ಕೊನೆಯ ದಿನ
ಬಳ್ಳಾರಿ, 02 ಜುಲೈ (ಹಿ.ಸ.): ಆ್ಯಂಕರ್ : ಶಾಲಾ ಶಿಕ್ಷಣ ಇಲಾಖೆಯ ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ 2026-27ನೇ ಸಾಲಿಗೆ ಸಿ.ಡಬ್ಲ್ಯೂ.ಎಸ್.ಎನ್ ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಚಿಕಿತ್ಸೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಅಭ್ಯರ್ಥಿಗಳಿಂ
ವಿಶೇಷಚೇತನ ಮಕ್ಕಳ ಕೇಂದ್ರ ; ಹೊರಗುತ್ತಿಗೆ ಆಧಾರದ ನೇಮಕಾತಿ: ಜುಲೈ 4 ಕೊನೆಯ ದಿನ


ಬಳ್ಳಾರಿ, 02 ಜುಲೈ (ಹಿ.ಸ.):

ಆ್ಯಂಕರ್ : ಶಾಲಾ ಶಿಕ್ಷಣ ಇಲಾಖೆಯ ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ 2026-27ನೇ ಸಾಲಿಗೆ ಸಿ.ಡಬ್ಲ್ಯೂ.ಎಸ್.ಎನ್ ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಚಿಕಿತ್ಸೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಎರಡು ಹುದ್ದೆಗಳ ಭರ್ತಿಗೆ ಅವಕಾಶವಿದ್ದು, ಫಿಜಿಯೋಥೆರಪಿಸ್ಟ್ (01 ಹುದ್ದೆ) ಹಾಗೂ ಎಸ್.ಆರ್.ಪಿ ಕೇಂದ್ರದ ವೈದ್ಯರ ಸಹಾಯಕ್ಕಾಗಿ ಒಬ್ಬ ಮಹಿಳಾ ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಜುಲೈ 2026 ರಿಂದ ಮಾರ್ಚ್ 2027ರ ವರೆಗಿನ (ಒಟ್ಟು 11 ತಿಂಗಳು) ಅವಧಿಗೆ ಮಾತ್ರ ಈ ನೇಮಕಾತಿ ಅನ್ವಯಿಸಲಿದೆ.

ವಿದ್ಯಾರ್ಹತೆ: ಫಿಜಿಯೋಥೆರಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬ್ಯಾಚಲರ್ ಆಫ್ ಫಿಜಿಯೋಥೆರಪಿ ಅಥವಾ ಡಿಪ್ಲೋಮ ಆಫ್ ಫಿಜಿಯೋಥೆರಪಿ ಶಿಕ್ಷಣ ಪೂರೈಸಿರಬೇಕು.

ಆಸಕ್ತ ಅರ್ಹ ಅಭ್ಯರ್ಥಿಗಳು ಜುಲೈ 04 ರ ಸಂಜೆ 05:30 ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಬಳ್ಳಾರಿ ಪಶ್ಚಿಮ ವಲಯ, ಕುರುಗೋಡು, ಕೋಟೆ ಬಳ್ಳಾರಿ.

ಹೆಚ್ಚಿನ ವಿವರಗಳಿಗಾಗಿ ದೂ.08392-266239, 9900535612, ಮೊ.7411907273 ಅನ್ನು ಸಂಪರ್ಕಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande