ಮನನ್ ಚತುರ್ವೇದಿ ಚಿತ್ರಕಲಾ ಪ್ರದರ್ಶನಕ್ಕೆ ಸುನೀಲ್ ಬನ್ಸಲ್ ಮೆಚ್ಚುಗೆ
ನವದೆಹಲಿ, 02 ಜುಲೈ (ಹಿ.ಸ.): ಆ್ಯಂಕರ್:ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಲ್ ಅವರು ರಾಜಸ್ಥಾನದ ಖ್ಯಾತ ಸಮಾಜಸೇವಕಿ ಮನನ್ ಚತುರ್ವೇದಿ ಅವರ ಮ್ಯಾರಥಾನ್ ಚಿತ್ರಕಲಾ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ದೆಹಲಿಯ ಪಾಲಿಕಾ ಬಜಾರ್ನಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಚಿತ
ಮನನ್ ಚತುರ್ವೇದಿ ಚಿತ್ರಕಲಾ ಪ್ರದರ್ಶನ


ನವದೆಹಲಿ, 02 ಜುಲೈ (ಹಿ.ಸ.):

ಆ್ಯಂಕರ್:ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ಸಲ್ ಅವರು ರಾಜಸ್ಥಾನದ ಖ್ಯಾತ ಸಮಾಜಸೇವಕಿ ಮನನ್ ಚತುರ್ವೇದಿ ಅವರ ಮ್ಯಾರಥಾನ್ ಚಿತ್ರಕಲಾ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ದೆಹಲಿಯ ಪಾಲಿಕಾ ಬಜಾರ್ನಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಚಿತ್ರ ಬಿಡಿಸುವ ವಿಶಿಷ್ಟ ಗುರಿಯನ್ನು ಮನನ್ ಚತುರ್ವೇದಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಸುನೀಲ್ ಬನ್ಸಲ್, ಸಮಾಜದಲ್ಲಿ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಾಗಿದೆ. ಸಮಾಜದ ಅಭಿವೃದ್ಧಿ ಸಮಾಜದ ಸಹಕಾರದಿಂದಲೇ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಜಗದಂಬಿಕಾ ಪಾಲ್ ಮಾತನಾಡಿ, ಕಲೆಯ ಮೂಲಕ ಸಮಾಜಕ್ಕೆ ಪ್ರೇರಣೆ ನೀಡುವ ಮನನ್ ಚತುರ್ವೇದಿ ಅವರ ಕಾರ್ಯ ವಿಶಿಷ್ಟವಾಗಿದೆ ಎಂದು ಪ್ರಶಂಸಿಸಿದರು.

ನಿರಾಶ್ರಿತ ಮತ್ತು ಪರಿತ್ಯಕ್ತ ಮಕ್ಕಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮನನ್ ಈ ಮ್ಯಾರಥಾನ್ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ಇದು ಅವರ 21ನೇ ಪ್ರದರ್ಶನವಾಗಿದ್ದು, ರಾಜಸ್ಥಾನ ಹಾಗೂ ಗುಜರಾತ್‌ನ ಹಲವು ಪ್ರಮುಖ ನಗರಗಳಲ್ಲಿಯೂ ಇದೇ ಮಾದರಿಯ ಪ್ರದರ್ಶನಗಳನ್ನು ನಡೆಸಿದ್ದಾರೆ.

72 ಗಂಟೆಗಳ ಕಾಲ ನಿರಂತರವಾಗಿ ಚಿತ್ರ ಬಿಡಿಸಿದ ವಿಶ್ವದಾಖಲೆ ಮನನ್ ಚತುರ್ವೇದಿ ಅವರ ಹೆಸರಿನಲ್ಲಿದೆ. ದೆಹಲಿಯ ಈ 24 ಗಂಟೆಗಳ ಮ್ಯಾರಥಾನ್‌ನಲ್ಲಿ ಅವರು ಒಟ್ಟು 52 ಕಲಾಕೃತಿಗಳನ್ನು ರಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮನನ್ ಚತುರ್ವೇದಿ, ಮಕ್ಕಳ ರಕ್ಷಣೆ ಮತ್ತು ಅವರ ಹಕ್ಕುಗಳ ಕುರಿತು ಸಮಾಜದಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುವ ಅಗತ್ಯವಿದೆ. ಮಕ್ಕಳು ಕೇವಲ ಸಹಾನುಭೂತಿ ಪಡೆಯಬೇಕಾದವರಲ್ಲ, ಅವರನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಮನೆಯಲ್ಲೇ ಇರುವ ಅನೇಕ ಮಕ್ಕಳು ಸಹ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಪರಿತ್ಯಕ್ತ ಹಾಗೂ ನಿರಾಶ್ರಿತ ಮಕ್ಕಳ ಪರಿಸ್ಥಿತಿ ಇನ್ನಷ್ಟು ದುಃಖಕರವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande