ಅಮರನಾಥ ಯಾತ್ರಿಕರ ಮೊದಲ ತಂಡಕ್ಕೆ ಬೀಳ್ಕೊಡುಗೆ
ಜಮ್ಮು, 02 ಜುಲೈ (ಹಿ.ಸ.): ಆ್ಯಂಕರ್: ಅಮರನಾಥ ಯಾತ್ರೆಯ ಮೊದಲ ತಂಡವನ್ನು ಬೀಳ್ಕೊಡುವ ಮುನ್ನ ಜಮ್ಮು–ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ವಿಶೇಷ ಪೂಜೆ–ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಮರನಾಥ ಯಾತ್ರೆ ಭಾರತದ ಆಧ್ಯಾತ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಹಾಗೂ ಕೋಟ್ಯಂತರ ಭಕ್
ಉಪರಾಜ್ಯಪಾಲ ಮನೋಜ್ ಸಿನ್ಹಾ


ಜಮ್ಮು, 02 ಜುಲೈ (ಹಿ.ಸ.):

ಆ್ಯಂಕರ್:

ಅಮರನಾಥ ಯಾತ್ರೆಯ ಮೊದಲ ತಂಡವನ್ನು ಬೀಳ್ಕೊಡುವ ಮುನ್ನ ಜಮ್ಮು–ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ವಿಶೇಷ ಪೂಜೆ–ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅಮರನಾಥ ಯಾತ್ರೆ ಭಾರತದ ಆಧ್ಯಾತ್ಮಿಕ ಪರಂಪರೆ, ಸಾಂಸ್ಕೃತಿಕ ಪರಂಪರೆ ಹಾಗೂ ಕೋಟ್ಯಂತರ ಭಕ್ತರ ಅಚಲ ನಂಬಿಕೆಯ ಪ್ರತೀಕವಾಗಿದ್ದು, ದೇಶದ ಅತ್ಯಂತ ಪವಿತ್ರ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಪ್ರತಿ ಯಾತ್ರಿಕನಿಗೂ ಸುರಕ್ಷತೆ, ಗೌರವ, ಆರಾಮ ಮತ್ತು ಅಗತ್ಯ ಸೌಲಭ್ಯಗಳನ್ನು ಅತ್ಯುತ್ತಮ ಮಟ್ಟದಲ್ಲಿ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜೊತೆಗೆ, ಈ ಪವಿತ್ರ ಯಾತ್ರೆಯ ಗೌರವ ಮತ್ತು ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ತಿಳಿಸಿದರು.

ಜಮ್ಮುವನ್ನು ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಅಧ್ಯಯನ ಹಾಗೂ ಮಾನವೀಯ ಮೌಲ್ಯಗಳ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಕನಸಿದೆ ಎಂದು ಸಿನ್ಹಾ ಹೇಳಿದರು. ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಆಧುನಿಕ ನಗರ ಯೋಜನೆಗೆ ಮಾದರಿಯಾಗಿ ತವಿ ನದಿ ತೀರಾಭಿವೃದ್ಧಿ ಯೋಜನೆ ರೂಪುಗೊಳ್ಳಬೇಕು. ಪ್ರಕೃತಿ, ಸಂಸ್ಕೃತಿ ಮತ್ತು ಆಧುನಿಕ ಸೌಲಭ್ಯಗಳು ಒಂದಕ್ಕೊಂದು ಪೂರಕವಾಗಿ ಅಭಿವೃದ್ಧಿಯ ಹೊಸ ಮಾದರಿಯನ್ನು ನಿರ್ಮಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಜಮ್ಮು ನಗರವು ಶತಮಾನಗಳಿಂದಲೂ ಆಧ್ಯಾತ್ಮಿಕ ಜಾಗೃತಿ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಜ್ಞಾನ ಪರಂಪರೆಯ ಕೇಂದ್ರವಾಗಿದೆ. ಇಲ್ಲಿನ ಪುರಾತನ ದೇವಾಲಯಗಳು ಭಾರತೀಯ ಸಂಸ್ಕೃತಿ ಮತ್ತು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಇತಿಹಾಸದಲ್ಲಿ ಪಡೆದಿದ್ದ ವಿಶಿಷ್ಟ ಸ್ಥಾನಮಾನವನ್ನು ಜಮ್ಮು ಮತ್ತೆ ಮರುಸ್ಥಾಪಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ನಗರವನ್ನು ಸ್ವಚ್ಛ, ಸುಂದರ ಮತ್ತು ಚೈತನ್ಯಪೂರ್ಣವಾಗಿಡಲು ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದ ಸಿನ್ಹಾ, ಜಮ್ಮು ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೊಂಡಿರುವ ತವಿ ನದಿ ತೀರಾಭಿವೃದ್ಧಿ ಕಾಮಗಾರಿಯನ್ನು ಶ್ಲಾಘಿಸಿದರು. ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ನದಿತೀರಗಳು ಈಗ ಸಂಸ್ಕೃತಿ, ಸಂಪ್ರದಾಯ, ಸಾಮಾಜಿಕ ಬಾಂಧವ್ಯ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಜೀವಂತ ಕೇಂದ್ರಗಳಾಗಿ ರೂಪುಗೊಂಡಿವೆ ಎಂದು ಹೇಳಿದರು.

ನದಿಯ ನಿರಂತರ ಹರಿವು ಮಾನವ ಜೀವನಕ್ಕೂ ಆದರ್ಶವಾಗಿದೆ. ನದಿಯ ನೀರು ಯಾವುದೇ ಭೇದಭಾವವಿಲ್ಲದೆ ಹರಿಯುವಂತೆ, ಮನುಷ್ಯನ ಬದುಕೂ ಪ್ರೀತಿ, ಸಹಕಾರ ಮತ್ತು ಪರಸ್ಪರ ಗೌರವದ ಮೌಲ್ಯಗಳೊಂದಿಗೆ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಮರನಾಥ ಯಾತ್ರೆಯ ಅವಧಿಯಲ್ಲಿ ಪ್ರತಿದಿನ ಸಂಜೆ ತವಿ ನದಿಯ ತೀರದಲ್ಲಿ ಆರತಿ ನೆರವೇರಿಸಲಾಗುವುದು. ಬೆಳಗುವ ಪ್ರತಿಯೊಂದು ದೀಪವೂ ಆಶಾಭಾವನೆ, ಪವಿತ್ರತೆ, ಹೊಸ ಆರಂಭ ಮತ್ತು ಭಕ್ತಿಯ ಸಂದೇಶವನ್ನು ಸಾರಲಿದೆ. ಅದು ಯಾತ್ರಿಕರ ದಾರಿಯನ್ನು ಮಾತ್ರವಲ್ಲ, ಸಮಾಜದ ಸೌಹಾರ್ದ ಮತ್ತು ಮಾನವೀಯತೆಯನ್ನೂ ಬೆಳಗಿಸಲಿದೆ ಎಂದು ಉಪರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande