
ಕೋಲಾರ,ಜು.೧೭ (ಹಿ.ಸ):
ಆ್ಯಂಕರ್ : ಕೋಲಾರ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸರಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶೇ. ೯೦ ರಷ್ಟು ಅಂಕ ಹಾಗೂ ಖಾಸಗಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿರುವ ವಿದ್ಯಾರ್ಥಿಗಳು ಶೇ. ೯೫ರಷ್ಟು ಅಂಕ ಮತ್ತು ಐಸಿಎಸ್ಇ ಮತ್ತು ಸಿಬಿಎಸ್ಇ ವಿದ್ಯಾರ್ಥಿಗಳು ಶೇ.೯೫ ರಷ್ಟು ಅಂಕ ಗಳಿಸಿರಬೇಕು. ಸರಕಾರಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡಿರುವ ಪಿಯುಸಿ ವಿದ್ಯಾರ್ಥಿಗಳು ಶೇ.೯೦ ಹಾಗೂ ಖಾಸಗಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡಿರುವ ವಿದ್ಯಾರ್ಥಿಗಳು ಶೇ.೯೫ ಅಂಕಗಳನ್ನು ಗಳಿಸಿರಬೇಕು. ಅರ್ಜಿಗಳನ್ನು ಶ್ರೀ ಪತಂಜಲಿ ಯೋಗಮಂದಿರ, ಬಿ.ಎಸ್.ಎನ್.ಎಲ್.ಕಚೇರಿ ಪಕ್ಕ, ರೈಲ್ವೇ ನಿಲ್ದಾಣದ ರಸ್ತೆ ಇಲ್ಲಿ ಬೆಳಗ್ಗೆ ೬.೪೫ ರಿಂದ ೭.೧೫ ರವರೆಗೆ ಸಂಜೆ ೪.೩೦ ರಿಂದ ೭ ಗಂಟೆವರೆಗೆ ಹಾಗೂ ರಾಜ್ ದಂತ ಚಿಕಿತ್ಸಾಲಯ, ಗಣೇಶನ ಗುಡಿ ಎದುರು, ಡೂಂಲೈಟ್ ಸರ್ಕಲ್, ಶ್ರೀ ನಂಜುಂಡೇಶ್ವರ ಹಾಲ್, ದೊಡ್ಡಪೇಟೆ ಇಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೭ ರವರೆಗೆ ಅರ್ಜಿ ಜೊತೆಗೆ ದೃಡೀಕರಿಸಿದ ಅಂಕಪಟ್ಟಿ, ಆಧಾರ್ ಕಾರ್ಡ್ ,ಒಂದು ಭಾವಚಿತ್ರದೊಂದಿಗೆ ಆಗಸ್ಟ್ ೫ ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಸಮಿತಿಯ ಕಾರ್ಯದರ್ಶಿ ಎಸ್.ವಿ. ವೇಣು ಗೋಪಾಲ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೯೪೪೮೩೧೦೩೨೦, ೯೪೪೮೮೧೧೧೨೪ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್