ನಾಳೆ ಕೊಪ್ಪಳ ಗವಿಮಠ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ , 11 ಜುಲೈ (ಹಿ.ಸ.): ಆ್ಯಂಕರ್ : ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ವ್ಯಾಪ್ತಿಯ 110ಕೆವಿ ಕೊಪ್ಪಳ ಉಪಕೇಂದ್ರಕ್ಕೆ ಸಂಬಂಧಿಸಿದಂತೆ 11 ಕೆವಿ ಮಾರ್ಗಗಳ ಕಾಮಗಾರಿಯ ನಿಮಿತ್ತ ಜುಲೈ 12 ರಂದು ಎಫ್-10 ಗವಿಮಠ ಫೀಡರ್ ವ್ಯಾಪ್ತಿಯಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲ
ನಾಳೆ ಕೊಪ್ಪಳ ಗವಿಮಠ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ , 11 ಜುಲೈ (ಹಿ.ಸ.):

ಆ್ಯಂಕರ್ : ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ವ್ಯಾಪ್ತಿಯ 110ಕೆವಿ ಕೊಪ್ಪಳ ಉಪಕೇಂದ್ರಕ್ಕೆ ಸಂಬಂಧಿಸಿದಂತೆ 11 ಕೆವಿ ಮಾರ್ಗಗಳ ಕಾಮಗಾರಿಯ ನಿಮಿತ್ತ ಜುಲೈ 12 ರಂದು ಎಫ್-10 ಗವಿಮಠ ಫೀಡರ್ ವ್ಯಾಪ್ತಿಯಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಎಫ್-10 ಗವಿಮಠ ಫೀಡರ್ಗೆ ಒಳಪಡುವ ಕುವೆಂಪುನಗರ, ಜಿಲ್ಲಾ ಜೈಲುಖಾನೆ, ಶಫಿ ಗಾರ್ಮೆಂಟ್ಸ್, ಹೂವಿನಾಳ ರಸ್ತೆ ಹಾಗೂ ಹಾಲವರ್ತಿ ರಸ್ತೆಯ ಎಲ್ಲಾ ಶೇಂಗಾ ಮಿಲ್ ಗಳು ಮತ್ತು ಗವಿಮಠ ಯಾತ್ರಿನಿವಾಸ ಸೇರಿದಂತೆ ಎಲ್ಲಾ ಮಾರ್ಗಗಳಲ್ಲಿ ಜುಲೈ 12 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಕಾಮಗಾರಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande