ಪ್ಲಾಸ್ಟಿಕ್ ತಪಾಸಣೆ; ನಿಯಮ ಉಲ್ಲಂಘನೆಗೆ ₹10 ಸಾವಿರ ದಂಡ
ವಿದ್ಯಾರಣ್ಯಪುರದ ತಿಂಡ್ಲು ಪ್ರದೇಶದಲ್ಲಿ ಬೆಂಗಳೂರು ಉತ್ತರ ನಗರ ನಿಗಮ ನಡೆಸಿದ ಪ್ಲಾಸ್ಟಿಕ್ ತಪಾಸಣಾ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದ್ದು, ₹10 ಸಾವಿರ ದಂಡ ವಿಧಿಸಲಾಗಿದೆ.
ವಿದ್ಯಾರಣ್ಯಪುರದ ತಿಂಡ್ಲಿನಲ್ಲಿ ಪ್ಲಾಸ್ಟಿಕ್ ತಪಾಸಣೆ; ನಿಯಮ ಉಲ್ಲಂಘನೆಗೆ ₹10 ಸಾವಿರ ದಂಡ


ಬೆಂಗಳೂರು, 11 ಜುಲೈ (ಹಿ.ಸ.):

ಆ್ಯಂಕರ್:

ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ವಿದ್ಯಾರಣ್ಯಪುರ ವಿಭಾಗದ ವಾರ್ಡ್ ಸಂಖ್ಯೆ 9ರ ತಿಂಡ್ಲು ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.

ತಪಾಸಣೆ ವೇಳೆ ಏಕಬಳಕೆ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದ್ದು, ಸಂಬಂಧಿಸಿದವರ ಮೇಲೆ ₹10,000 ದಂಡ ವಿಧಿಸಲಾಗಿದೆ.

ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಉದ್ದೇಶದಿಂದ ಇಂತಹ ತಪಾಸಣಾ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಪ್ಲಾಸ್ಟಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K


 rajesh pande