ಶೇಕಡಾ 100 ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ ಬಿಎಲ್ಒ ಗಳಿಗೆ ಅಭಿನಂದನೆ
ಹೊಸಪೇಟೆ, 11 ಜುಲೈ (ಹಿ.ಸ.): ಆ್ಯಂಕರ್ : ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ 2026 ಕ್ಕೆ ಸಂಬಂಧಿಸಿದಂತೆ ಕಡಿಮೆ ಅವಧಿಯಲ್ಲಿ ಶೇಕಡಾ 100 ರಷ್ಟು ಗಣತಿ ನಮೂನೆಗಳನ್ನು ಅರ್ಹ ಮತದಾರರಿಗೆ ವಿತರಣೆ ಮಾಡಿದ ಬಿ.ಎಲ್.ಓ ಗಳಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪ್ರಶ
Congratulations to BLOs for distributing 100 percent census forms


Congratulations to BLOs for distributing 100 percent census forms


ಹೊಸಪೇಟೆ, 11 ಜುಲೈ (ಹಿ.ಸ.):

ಆ್ಯಂಕರ್ : ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ 2026 ಕ್ಕೆ ಸಂಬಂಧಿಸಿದಂತೆ ಕಡಿಮೆ ಅವಧಿಯಲ್ಲಿ ಶೇಕಡಾ 100 ರಷ್ಟು ಗಣತಿ ನಮೂನೆಗಳನ್ನು ಅರ್ಹ ಮತದಾರರಿಗೆ ವಿತರಣೆ ಮಾಡಿದ ಬಿ.ಎಲ್.ಓ ಗಳಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪ್ರಶಂಸೆ ಮತ್ತು ಅಭಿನಂದನೆ ಪತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.

ವಿಶೇಷ ತೀವ್ರ ಮತದಾರ ಪಟ್ಟಿ ಪರಿಷ್ಕರಣೆ 2026 ಕ್ಕೆ ಸಂಬಂಧಿಸಿದಂತೆ 90 ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ ಬಿ.ಎಲ್.ಓ ಗಳಿಗೆ ವಹಿಸಲಾಗಿದ್ದ ಗಣತಿ ನಮೂನೆಗಳನ್ನು ಎಲ್ಲಾ ಅರ್ಹ ಮತದಾರರಿಗೆ ವಿತರಿಸುವುದು ಮತ್ತು ಮೊಬೈಲ್ ಆಪ್ ನಲ್ಲಿ ಎಲ್ಲಾ ಗಣತಿ ನಮೂನೆಗಳ ಡಿಜಟಲೀಕರಣ ಕಾರ್ಯವನ್ನು ಕೇವಲ 10 ದಿನಗಳಲ್ಲಿ ಪೂರ್ಣಗೊಳಿಸಿ ಚುನಾವಣಾ ಪ್ರಮುಖ ಕಾರ್ಯದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಶೇಕಡಾ 100 ರಷ್ಟು ಗಣತಿ ನಮೂನೆಗಳನ್ನು ಅರ್ಹ ಮತದಾರರಿಗೆ ವಿತರಣೆ ಮಾಡಿ ಅಗತ್ಯ ದತ್ತಾಂಶಗಳನ್ನು ಸಂಗ್ರಹಣೆ ಮಾಡಿ ಬಿ.ಎಲ್.ಓ ಆಪ್ ನಲ್ಲಿ ಡಿಜಟಲೀಕರಣ ಮಾಡಿ ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಪಾಪಿನಾಯಕನಹಳ್ಳಿ ಕಂದಾಯ ಗ್ರಾಮ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಗ್ರಾಮ ಆಡಳಿತಾಧಿಕಾರಿ ವಿನೋದ ಕುಂಬಾರ್, ಕುಂಟಗಲ್ಲಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಅಶ್ವಿನಿ ಜಿ.ಕೆ. ಪಾಪಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಿಲ್ಪಕಲಾ, ಸೀತಾರಾಮ ತಾಂಡ ಕಂದಾಯ ಗ್ರಾಮ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಗ್ರಾಮ ಆಡಳಿತಾಧಿಕಾರಿ ಗಂಗಾಧರ, ಹೊಸಪೇಟೆ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಪ್ರಶಂಸಾ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶೃತಿ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande