ಜುಲೈ 14ಕ್ಕೆ ವಿಜಯಪುರಕ್ಕೆ ಬಾಲಿವುಡ್ ನಟ ಗೋವಿಂದಾ; ಸೋಮದೇವರಹಟ್ಟಿಯ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿ
ವಿಜಯಪುರ, 11 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ. 1ರಲ್ಲಿ ಜುಲೈ 13 ಮತ್ತು 14ರಂದು ನಡೆಯಲಿರುವ ಶ್ರೀಮಾತಾ ದುರ್ಗಾದೇವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬಾಲಿವುಡ್ ಖ್ಯಾತ ನಟ ಗೋವಿಂದಾ ಅವರು ಜುಲೈ 14ರಂದು ಆಗಮಿಸಲಿದ್ದಾರೆ ಎಂಬ ಮಾಹಿತಿ
ಆಕ್ಟರ್


ವಿಜಯಪುರ, 11 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ. 1ರಲ್ಲಿ ಜುಲೈ 13 ಮತ್ತು 14ರಂದು ನಡೆಯಲಿರುವ ಶ್ರೀಮಾತಾ ದುರ್ಗಾದೇವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬಾಲಿವುಡ್ ಖ್ಯಾತ ನಟ ಗೋವಿಂದಾ ಅವರು ಜುಲೈ 14ರಂದು ಆಗಮಿಸಲಿದ್ದಾರೆ ಎಂಬ ಮಾಹಿತಿ ಆಯೋಜಕರಿಂದ ತಿಳಿದುಬಂದಿದೆ. ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರ ನಡೆಯುತ್ತಿದೆ.

ಜಾತ್ರಾ ಮಹೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿರುವ ನಟ ಗೋವಿಂದಾ, ವಿಜಯಪುರ ಜಿಲ್ಲೆಯ ಭಕ್ತರನ್ನು ಭೇಟಿ ಮಾಡಿ ದುರ್ಗಾದೇವಿಯ ದರ್ಶನ ಪಡೆಯಲಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಭಕ್ತರಲ್ಲಿ ಈಗಾಗಲೇ ಭಾರೀ ಉತ್ಸಾಹ ಮನೆ ಮಾಡಿದೆ.

ಕಾರ್ಯಕ್ರಮದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಗೋವಿಂದಾ, ವಿಜಯಪುರದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರ. ಶ್ರೀ ದುರ್ಗಾದೇವಿಯ ಕೃಪೆ ಎಲ್ಲರ ಮೇಲಿರಲಿ. ತಾಯಿ ದುರ್ಗಾದೇವಿ ಪ್ರತಿಯೊಬ್ಬರಿಗೂ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದ್ದಾರೆ.

ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 14ರಂದು ಗೋವಿಂದಾ ಅವರ ಉಪಸ್ಥಿತಿಯಿಂದ ಜಾತ್ರೆಯ ಮೆರುಗು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಅಗತ್ಯ ಪೊಲೀಸ್ ಭದ್ರತೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande