
ಬೆಂಗಳೂರು, 11 ಜುಲೈ (ಹಿ.ಸ.):
ಆ್ಯಂಕರ್:ಕನ್ನಡ ಸಿನಿಮಾರಂಗದಲ್ಲಿ ಸದ್ಯ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಕರಾವಳಿ.. ಟ್ರೈಲರ್ ಮೂಲಕ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿರುವ ಕರಾವಳಿ ಜುಲೈ 24ಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈ ನಡುವೆ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಈಗ ಬಹಿರಂಗವಾಗಿದೆ. ಬಹುನಿರೀಕ್ಷೆಯ ಕರಾವಳಿ ಸಿನಿಮಾದಲ್ಲಿ ಕನ್ನಡದ ಖ್ಯಾತ ಗಾಯಕಿ, ರಂಗಕರ್ಮಿ, ಬಿ ಜಯಶ್ರೀ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಅನೇಕ ಸಮಯದ ಬಳಿಕ ಬಿ ಜಯಶ್ರೀ ಸಿನಿಮಾ ಹಾಡಿಗೆ ಧ್ವನಿಯಾಗಿರುವುದು ವಿಶೇಷ.
ಕರಾವಳಿ ಅಪ್ಪಟ ಕನ್ನಡದ ಸಿನಿಮಾ, ನಮ್ಮ ಮಣ್ಣಿನ ಸಿನಿಮಾ. ಈ ಸಿನಿಮಾಗೆ ಜಯಶ್ರೀ ಹಾಡಿರುವುದು ಸಿನಿಮಾ ಸಂಗೀತ ವಿಭಾಗಕ್ಕೆ ಮತ್ತಷ್ಟು ತೂಕ ಬಂದಂತೆ ಆಗಿದೆ. ಜಯಾಶ್ರೀ ಅವರ ಕಂಚಿನ ಕಂಠದಿಂದ ಯಾವ ರೀತಿಯ ಹಾಡು ಮೂಡಿಬಂದಿದೆ ಎನ್ನುವುದು ಸದ್ಯದ ಕುತೂಹಲ.. ಈ ಸಿನಿಮಾದಲ್ಲಿ ಜಯಶ್ರೀ ಅವರು ಎಮೋಷನಲ್ ಹಾಡನ್ನು ಹಾಡಿದ್ದಾರಾ ಅಥವಾ ಡಿವೈನ್ ಹಾಡಿಗೆ ಧ್ವನಿಯಾಗಿದ್ದಾರಾ ಎನ್ನುವ ನಿರೀಕ್ಷೆ ಹೆಚ್ಚಾಗಿದೆ.
ಕರಾವಳಿ ಸಿನಿಮಾದ ಬಗ್ಗೆ ಹಾಡು ಧ್ವನಿಯಾಗಿರುವ ಹಾಡಿನ ಬಗ್ಗೆ ಕೇಳಿ ಸಿಕ್ಕಾಪಟ್ಟೆ ಇಂಪ್ರೆಸ್ ಆದ ಜಯಶ್ರೀ ಅವರು ತುಂಬಾ ಖುಷಿಯಿಂದ ಹಾಡನ್ನು ಹಾಡಿದ್ದಾರೆ. ಹಾಗೂ ಸಿನಿಮಾದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಯಶ್ರೀ ಅವರ ಧ್ವನಿ ರಂಗಭೂಮಿಯಲ್ಲಿ ಮಾತ್ರ ಕೇಳಲು ಸಿಗುತಿತ್ತು. ಅನೇಕ ವರ್ಷಗಳ ಬಳಿಕ ಇದೀಗ ಸಿನಿಮಾ ಹಾಡಿಗೆ ಧ್ವನಿ ನೀಡುವ ಮೂಲಕ ಸಂಗೀತ ಪ್ರೀಯರ ಕುತೂಹಲ ಹೆಚ್ಚಿಸಿದ್ದಾರೆ. ಅಪ್ಪಟ ಕನ್ನಡದ ಗಾಯಕಿ ಜಯಶ್ರೀ ಅವರ ಹಾಡನ್ನು ಕರಾವಳಿ ಸಿನಿಮಾದಲ್ಲಿ ಕೇಳಲು ನಿಜಕ್ಕೂ ಗಾನಪ್ರಿಯರು ಉತ್ಸುಕರಾಗಿದ್ದಾರೆ.
ಈಗಾಗಲೇ ಸಿನಿಮಾದಿಂದ ರಿಲೀಸ್ ಆಗಿರುವ ರೊಮ್ಯಾಂಟಿಕ್ ಮೆಲೋಡಿ ಮುದ್ದು ಗುಮ್ಮ...ಹಾಗೂ ಸೋಲ್ ಆಫ್ ಕರಾವಳಿ ಈ ಎರಡು ಹಾಡುಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿವೆ.. ಇದೀಗ ಕರಾವಳಿ ಸಿನಿಮಾದಿಂದ ಯಾವ ಹಾಡು ಬರಲಿದೆ, ಜಯಶ್ರೀ ಹಾಡಿರುವ ಹಾಡು ರಿಲೀಸ್ ಆಗುತ್ತಾ ಎನ್ನುವ ಕುತೂಹಲ ಸಹ ಹೆಚ್ಚಾಗಿದೆ.
ಅಂದಹಾಗೆ ಕರಾವಳಿ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆಯಿದೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಿಟಿಸಿದ್ದಾರೆ. ನಾಯಕಿಯರಾಗಿ ಸಂಪದಾ, ಸುಷ್ಮಿತಾ ಬಣ್ಣ ಹಚ್ಚಿದ್ದಾರೆ. ಇನ್ನು ಉಳಿದಂತೆ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.